newsics.com
ಆಂಧ್ರಪ್ರದೇಶ: ಯುವಕನೊಬ್ಬ ಮಂಗಳಮುಖಿಯನ್ನು ಮೂರು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿರುವ ಘಟನೆ ಆಂಧ್ರಪ್ರದೇಶದ ಎನ್ ಟಿಆರ್ ಜಿಲ್ಲೆಯಲ್ಲಿ ನಡೆದಿದೆ.
ವಿಸ್ಸನ್ನಪೇಟೆ ನಿವಾಸಿ ನಂದು ಮತ್ತು ಎಂಕೂರಿನ ತೃತೀಯಲಿಂಗಿ ನಕ್ಷತ್ರಾ ಮದುವೆಯಾದ ನವ ಜೋಡಿ. ಸದ್ಯ ಇವರಿಬ್ಬರ ಮದುವೆಯ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ತೃತೀಯಲಿಂಗಿ ಸಮುದಾಯದ ಪ್ರತಿನಿಧಿಗಳ ಸಮ್ಮುಖದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚಿಗಷ್ಟೇ ಮದುವೆ ನಡೆದಿದೆ.
ನಾನು ಮಂಗಳಮುಖಿಯನ್ನು ಮದುವೆಯಾಗುವುದು ನನ್ನ ಕುಟುಂಬದವರಿಗೆ ಇಷ್ಟವಿಲ್ಲ. ಆದರೆ ನಾವಿಬ್ಬರು ಸುದೀರ್ಘ ಚರ್ಚೆ ನಡೆಸಿ ಮದುವೆಯಾಗಲು ನಿರ್ಧರಿಸಿದೆವು.