newsics.com
ಮೈಸೂರು: ನಗರದ ಚೆಲುವಾಂಬಾ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ವಿದ್ಯಾಧರೆ (42) ಲಕ್ಷ್ಮೀಪುರಂನ ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ.
ವಿದ್ಯಾಧರೆ ಅವರು ಪತಿ ಕೆ.ಆರ್.ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಷಣ್ಮುಖ ಹಾಗೂ ಮೂವರು ಮಕ್ಕಳೊಂದಿಗೆ ವಾಸವಿದ್ದರು.
ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ವಿದ್ಯಾಧರೆ, ಮಕ್ಕಳೊಂದಿಗೆ ಕೋಣೆಯಲ್ಲಿ ಮಲಗಿದ್ದಾರೆ. ಭಾನುವಾರ ಬೆಳಗ್ಗೆ 9 ಗಂಟೆಯಾದರೂ ಹೊರಬಾರದ್ದರಿಂದ ಅನುಮಾನಗೊಂಡ ಡಾ.ಷಣ್ಮುಖ ಅವರು ಕೋಣೆಗೆ ಹೋಗಿ ಪರೀಕ್ಷಿಸಿದ್ದು, ಮೃತಪಟ್ಟಿರುವುದು ಗೊತ್ತಾಗಿದೆ. ಅವರ ಸಾವಿನ ಬಗ್ಗೆ ಅನುಮಾನವಿದೆ’ ಎಂದು ಮೃತರ ಸಹೋದರ ಶ್ರೀಕಾಂತ್ ದೂರು ನೀಡಿದ್ದಾರೆ.
ಬೆರಳಚ್ಚು ತಂಡದೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯದ ಗೌಡಗೆರೆಯ ಡಾ.ವಿದ್ಯಾಧರೆ ಅವರನ್ನು ಡಾ.ಷಣ್ಮುಖ ಅವರು 14 ವರ್ಷದ ಹಿಂದೆ ವಿವಾಹವಾಗಿದ್ದರು. ವೈದ್ಯೆ ವಿದ್ಯಾಧರೆ ಅವರು ಶನಿವಾರ ತವರು ಮನೆಯಿಂದ ಮೈಸೂರಿನಲ್ಲಿನ ಗಂಡನ ಮನೆಗೆ ಬಂದಿದ್ದರು. ಆದರೆ, ಡಾ.ವಿದ್ಯಾಧರೆ ಭಾನುವಾರ ಬೆಳಗ್ಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಲವು ವರ್ಷಗಳಿಂದ ಡಾ.ಷಣ್ಮುಖ ಮತ್ತು ಡಾ.ಜಿ.ಎಸ್.ವಿದ್ಯಾಧರೆ ನಡುವೆ ವಿರಸ ಇತ್ತು ಎಂಬ ಆರೋಪ ಕೇಳಿಬಂದಿದೆ.
ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಡಾ.ಷಣ್ಮುಖ ಕುಟುಂಬದ ವಿರುದ್ಧ ಡಾ. ವಿದ್ಯಾಧರೆ ತಾಯಿ ಆರೋಪ ಮಾಡಿದ್ದಾರೆ.
ತಂದೆ, ತಾಯಿ ಜತೆ ಸೇರಿ ಪತ್ನಿ ಶ್ರಾವಣಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ!
ಅಮೆರಿಕ ಚುನಾವಣಾ ರಾಜಕೀಯ: ಹ್ಯಾರಿಸ್ ಬೆಂಬಲಿಗರಿಂದ 43 ಅಡಿ ಎತ್ತರದ ಟ್ರಂಪ್ ಬೆತ್ತಲೆ ಪ್ರತಿಮೆ ಸ್ಥಾಪನೆ!