newsics.com
ಬೆಂಗಳೂರು: ಗಂಗಾರತಿ ಮಾದರಿಯಲ್ಲೇ ‘ಕಾವೇರಿ ಆರತಿ’ ಕಾರ್ಯಕ್ರಮ ಮಾಡುವುದಾಗಿ ಘೋಷಿಸಿದ್ದ ಕರ್ನಾಟಕ ಸರ್ಕಾರ ಅದನ್ನು ಈ ಬಾರಿಯ ದಸರಾ ಉತ್ಸವದಿಂದಲೇ ಆರಂಭಿಸಲಾಗುವುದು ಎಂದು ಹೇಳಿದೆ.
ಕಾವೇರಿ ಆರತಿಯ ಪ್ರಾಯೋಗಿಕ ಕಾರ್ಯಕ್ರಮ ಇದೇ ಅಕ್ಟೋಬರ್ 3ರಂದು ಶ್ರೀರಂಗಪಟ್ಟಣದಲ್ಲಿ ಆರಂಭವಾಗಲಿದೆ. ಈ ದಸರಾ ಸಂದರ್ಭದಲ್ಲೇ ಕಾವೇರಿ ಆರತಿಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಪ್ರಾಯೋಗಿಕವಾಗಿ ಅ. 3 ರಿಂದ 5 ದಿನ ಕಾವೇರಿ ಆರತಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ತಿಳಿಸಿದ್ದಾರೆ.