ದಸರಾದಿಂದಲೇ ‘ಕಾವೇರಿ ಆರತಿ’ ಆರಂಭ; ಅ.3ಕ್ಕೆ ಚಾಲನೆ
newsics.com ಬೆಂಗಳೂರು: ಗಂಗಾರತಿ ಮಾದರಿಯಲ್ಲೇ ‘ಕಾವೇರಿ ಆರತಿ’ ಕಾರ್ಯಕ್ರಮ ಮಾಡುವುದಾಗಿ ಘೋಷಿಸಿದ್ದ ಕರ್ನಾಟಕ ಸರ್ಕಾರ ಅದನ್ನು ಈ ಬಾರಿಯ ದಸರಾ ಉತ್ಸವದಿಂದಲೇ ಆರಂಭಿಸಲಾಗುವುದು ಎಂದು ಹೇಳಿದೆ. ಕಾವೇರಿ ಆರತಿಯ ಪ್ರಾಯೋಗಿಕ ಕಾರ್ಯಕ್ರಮ ಇದೇ ಅಕ್ಟೋಬರ್ 3ರಂದು ಶ್ರೀರಂಗಪಟ್ಟಣದಲ್ಲಿ ಆರಂಭವಾಗಲಿದೆ. ಈ ದಸರಾ ಸಂದರ್ಭದಲ್ಲೇ ಕಾವೇರಿ ಆರತಿಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಪ್ರಾಯೋಗಿಕವಾಗಿ ಅ. 3 ರಿಂದ 5 ದಿನ ಕಾವೇರಿ ಆರತಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ತಿಳಿಸಿದ್ದಾರೆ.
Copy and paste this URL into your WordPress site to embed
Copy and paste this code into your site to embed