newsics.com
ನಿಮ್ಮ ಸಂಗಾತಿಯ ವಿಚಾರದಲ್ಲಿ ನೀವೆಲ್ಲಿ ಎಡವುತ್ತಿದ್ದೀರಿ..? ನಿಮ್ಮ ಯಾವ ಗುಣಗಳು ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಆಸಕ್ತಿ ಕಳೆದು ಹೋಗುವಂತೆ ಮಾಡಿದೆ ಎಂಬುದನ್ನು ತಿಳಿಯೋಣ…
ಕೆಲವರು ತಮ್ಮ ಪ್ರೀತಿ ಪಾತ್ರರೆಡೆಗೆ ಅತಿಯಾದ ಕಾಳಜಿ ತೋರಿಸುತ್ತಾರೆ. ಎಷ್ಟೆಂದರೆ ಸಂಗಾತಿಗೆ ಉಸಿರುಗಟ್ಟುವಷ್ಟರ ಮಟ್ಟಿಗೆ ಅವರ ಕಾಳಜಿ ಇರುತ್ತದೆ. ಇದು ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಕಿರಿಕಿರಿ ಮೂಡುವಂತೆ ಮಾಡಿಬಿಡಬಹುದು. ನಿಮ್ಮನ್ನು ದೂರವಿಡಲು ಆರಂಭಿಸಬಹುದು.
ಸಂಗಾತಿಯೆಡೆಗೆ ಕಾಳಜಿ ತೋರುವುದು ಖಂಡಿತ ತಪ್ಪಲ್ಲ. ಆದರೆ ಅತಿಯಾಗಿ ಬೆಲೆ ನೀಡುವ ಮೂಲಕ ನಿಮ್ಮ ಬೆಲೆ ನೀವು ಕಳೆದುಕೊಳ್ಳುತ್ತಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ.
ನಿಮ್ಮ ತಪ್ಪಿಲ್ಲದಿದ್ದರೂ ಒಮ್ಮೊಮ್ಮೆ ಸಂಗಾತಿಯು ನಿಮ್ಮ ಕೈ ತಪ್ಪಿ ಹೋಗುತ್ತಾರೆ. ಇದಕ್ಕೆ ನಿಮ್ಮ ಸಂಗಾತಿಯ ಅಪ್ರಾಮಾಣಿಕತೆ ಕಾರಣವಾಗಿರುತ್ತದೆ.
ಗಡಿಬಿಡಿಯಲ್ಲಿ ಬೆಳೆದ ಸಂಬಂಧವು ಜಾಸ್ತಿ ದಿನ ಬಾಳಿಕೆ ಬಾರದು. ಆಕರ್ಷಣೆ ಕರಗುತ್ತದೆ, ಆಗ ಪ್ರೀತಿ ಮಾಸುತ್ತದೆ. ನಿಮ್ಮ ಜೊತೆಗೆ ಕಾಲ ಕಳೆಯಲು ಆ ವ್ಯಕ್ತಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಆ ವ್ಯಕ್ತಿಗೆ ಅಷ್ಟೇ ವೇಗದಲ್ಲಿ ಇನ್ನೊಬ್ಬರ ಮೇಲೆ ಆಸಕ್ತಿ ಮೂಡಿದಲೂ ಆಶ್ಚರ್ಯವಿರುವುದಿಲ್ಲ. ಅವಸರವೇ ಅಪಘಾತಕ್ಕೆ ಕಾರಣ ಎಂಬ ಗಾದೆ ಮಾತಿನಂತೆ ನಿಮ್ಮ ಜೀವನವಾಗುತ್ತದೆ.