newsics.com
ಬೆಂಗಳೂರು: ಹಲವರನ್ನು ಬೆಚ್ಚಿಬೀಳಿಸಿದ ಮಹಾಲಕ್ಷ್ಮೀ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಕೊಲೆ ಪ್ರಕರಣದಲ್ಲಿ ಶಂಕಿತನಾಗಿದ್ದ ಮುಕ್ತಿ ರಂಜನ್ ರಾಯ್ ಆತ್ಮಹತ್ಯೆಗೂ ಮುನ್ನ ಮಹಾಲಕ್ಷ್ಮೀ ಕೊಲೆ ವಿಚಾರವನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದನಂತೆ, ಅಲ್ಲದೇ ಇಬ್ಬರ ನಡುವಿನ ಸಂಬಂಧ ಕುರಿತಂತೆ ಸ್ಪೋಟಕ ಸಂಗತಿಗಳನ್ನ ರಿವೀಲ್ ಮಾಡಿದ್ದ ಎನ್ನಲಾಗಿದೆ.
ಸ್ಥಳೀಯ ಪೊಲೀಸರು ರಂಜನ್ ಮೃತ ದೇಹದ ಬಳಿಯಿದ್ದ ಡೆತ್ನೋಟ್ ವಶಕ್ಕೆ ಪಡೆದುಕೊಂಡಿದ್ದು, ಈ ಪತ್ರದಲ್ಲಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಿರುವ ಸಂಗತಿಯನ್ನು ಒಪ್ಪಿಕೊಂಡಿದ್ದಾನಂತೆ. ಒಡಿಯಾ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಡೆತ್‌ನೋಟ್ ಬರೆದಿದ್ದಾನೆ ಎನ್ನಲಾಗಿದೆ.
ರಂಜನ್ ಹೇಳಿಕೊಂಡಿರುವಂತೆ, ಮಹಾಲಕ್ಷ್ಮೀ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಜಗಳ ಮಾಡಿದ್ದಳಂತೆ. ಅಲ್ಲದೇ ಹಲವು ಬಾರಿ ಈ ವಿಚಾರವಾಗಿಯೇ ಕೈ ಮಾಡಿಕೊಂಡಿದ್ದಳಂತೆ. ರಂಜನ್ ಪ್ರೀತಿ ಮಾಡಿದ್ದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡು ಆತನಿಂದ ಸಾಕಷ್ಟು ಹಣ ಪಡೆದಿದ್ದಳಂತೆ.
ಪತ್ರದಲ್ಲಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಲು ನಿರ್ಧರಿಸಿದ್ದು ಎಂಬುದನ್ನೂ ಬಿಚ್ಚಿಟ್ಟಿರುವ ಆರೋಪಿ, ಆಕೆ ತನ್ನನ್ನೇ ಕೊಲೆ ಮಾಡಲು ಮುಂದಾಗಿದ್ದಳು. ಆದ್ದರಿಂದಲೇ ಆಕೆಯನ್ನು ಕೊಲೆ ಮಾಡಬೇಕಾಯ್ತು ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಮಹಾಲಕ್ಷ್ಮೀಯ ನಡೆಯಿಂದ ನನ್ನ ಮಗ ಕುಗ್ಗಿ ಹೋಗಿದ್ದ, ಆಕೆ ಆತನ ಬಳಿ ಇದ್ದ ಚಿನ್ನದ ಸರ ಹಾಗೂ ಉಂಗುರವನ್ನು ಕೂಡ ತೆಗೆದುಕೊಂಡಿದ್ದಳು ಎಂದು ರಂಜನ್ ತಾಯಿ ಆರೋಪಿಸಿದ್ದಾರೆ.
ರಂಜನ್ ಹಾಗೂ ಮಹಾಲಕ್ಷ್ಮೀ ಬೆಂಗಳೂರಿನ ಮಾಲ್ ಒಂದರ ಔಟ್ಲೆಟ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯ ಆಗಿ ರಿಲೇಷನ್ಶಿಪ್ ಹೊಂದಿದ್ದರಂತೆ. ಈ ವಿಚಾರ ಗಂಡನಿಗೆ ತಿಳಿದ ಬಳಿಕ ಕಳೆದ 9 ತಿಂಗಳಿನಿಂದ ಮಹಾಲಕ್ಷ್ಮೀ ಗಂಡನಿಂದ ದೂರವಾಗಿದ್ದಳಂತೆ.
ಮಹಾಲಕ್ಷ್ಮೀ ಒಂಟಿಯಾಗಿ ಬಾಡಿಗೆ ಮನೆಗೆ ಶಿಫ್ಟ್ ಆದ ಬಳಿಕ ರಂಜನ್ ಬಳಿ ಮದುವೆ ಆಗುವಂತೆ ಒತ್ತಾಯ ಮಾಡುತ್ತಿದ್ದಳಂತೆ.
ಬೆಂಳೂರಿನ ಪೊಲೀಸರು ಮಹಾಲಕ್ಷ್ಮೀ ಕೊಲೆ ಪ್ರಕರಣ ಬೆಳಕಿಗೆ ಬಂದ ಬಳಿಕ ಶಂಕಿತನನ್ನು ಹುಡುಕಿಕೊಂಡು ಒಡಿಶಾಗೆ ತೆರಳಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ರಂಜನ್‌ಗೆ ಬಂಧನದ ಭೀತಿ ಎದುರಾಗಿತ್ತು. ಇದೇ ಆತಂಕದಲ್ಲಿ ಡೆತ್ ನೋಟ್ ಬರೆದಿಟ್ಟು ರಂಜನ್ ಸಾವಿಗೆ ಶರಣಾಗಿದ್ದ ಎನ್ನಲಾಗಿದೆ.
ಘಟನೆ ಬಗ್ಗೆ ರಂಜನ್ ಸಹೋದರ ಸತ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ನನ್ನ ಸಹೋದರ ಮಹಾಲಕ್ಷ್ಮೀಯನ್ನು ಸೆಪ್ಟೆಂಬರ್ 3ರಂದು ನಡೆದ ಜಗಳದ ಬಳಿಕ ಕೊಲೆ ಮಾಡಿದ್ದ ಬಗ್ಗೆ ತಿಳಿಸಿದ್ದ. ಅಂದು ನಡುರಾತ್ರಿ ಆಕೆಯ ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್ನಲ್ಲಿ ಇಟ್ಟಿದ್ದ. ಮಹಾಲಕ್ಷ್ಮೀ ಮೃತದೇಹವನ್ನು ಕೆಲ ತಿಂಗಳ ಬಳಿಕ ಬೇರೆಡೆ ಬಿಸಾಡುವ ಪ್ಲ್ಯಾನ್ ಇತ್ತು ಎಂದು ತಿಳಿಸಿದ್ದಾನೆ ಎಂದು ವರದಿಗಳು ಹೇಳಿವೆ.