newsics.com
ಏನೇ ಆದರೂ, ಅನಾಹುತಗಳ ಸುದ್ದಿ ತಿಳಿದ ಮೇಲೂ ಈ ರೀಲ್ಸ್ ಮಾಡುವವರ ಹುಚ್ಚಾಟ ಮಾತ್ರ ನಿಲ್ಲುತ್ತಿಲ್ಲ. ಅಪಾಯಕಾರಿ ರೀಲ್ಸ್ ಮಾಡಲು ಹಲವರು ಪ್ರಾಣ ಕಳೆದುಕೊಂಡರೂ ಎಚ್ಚೆತ್ತುಕೊಳ್ಳುತ್ತಿಲ್ಲ.
ಇಲ್ಲಿಯೂ ಅಪಾಯಕಾರಿ ರೀಲ್ಸ್ ಮಾಡಲು ಹೋದ ವ್ಯಕ್ತಿಯೊಬ್ಬ ವಿದ್ಯುತ್ ಶಾಕ್‌ನಿಂದ ಗಾಯಗೊಂಡಿದ್ದಾನೆ. ಪ್ರಾಣಾಪಾಯದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾನೆ.
ವೇಗವಾಗಿ ಓಡುತ್ತಿರುವ ರೈಲಿನ ಮೇಲೆ ಕುಳಿತು ರೀಲ್ಸ್ ಮಾಡಲು ಹೋದ ಯುವಕನಿಗೆ ಕರೆಂಟ್ ಶಾಕ್ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.
ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ರೀಲ್ಸ್ ಮಾಡಲು ರೈಲಿನ ಮೇಲೆ ಯುವಕ ಅಪಾಯಕಾರಿಯಾಗಿ ಹತ್ತಿದ್ದಾನೆ. ಅದೇ ಸಮಯದಲ್ಲಿ, ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡಿದ್ದು, ಯುವಕನ ಕೈ, ಬೆನ್ನು ಸೇರಿದಂತೆ ಹಲವೆಡೆ ಗಾಯಗಳಾಗಿವೆ. ಆದರೆ ಈ ಘಟನೆ ಎಲ್ಲಿ ನಡೆದದ್ದು ಎಂಬ ಬಗ್ಗೆಯಾಗಲೀ, ಯುವಕನ ಬಗ್ಗೆ ಯಾವುದೇ ಮಾಹಿತಿಯಿಲ್ಲ.
https://twitter.com/i/status/1838855962045677999