newsics.com
ಬೆಂಗಳೂರು : ಕರ್ನಾಟಕ ಮತ್ತು ಬೆಂಗಳೂರಿನ ಬಗ್ಗೆ ಮಾತನಾಡಿದ್ದ ಉತ್ತರ ಭಾರತ ಸುಗಂಧ್ ಶರ್ಮಾಗೆ ಕನ್ನಡಿಗರು ಚಳಿ ಬಿಡಿಸಿದ್ದರು
. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಯೂ ಟರ್ನ್ ಹೊಡೆದ ಆಕೆ, ʼನನಗೆ ಕನ್ನಡ ಅಂದರೆ ತುಂಬಾ ಇಷ್ಟ, ಕನ್ನಡ ಕಲಿಯಲು ಪ್ರಯತ್ನ ಮಾಡ್ತಿದ್ದೇನೆʼ ಅಂತಾ ರೀಲ್ಸ್ ಮಾಡಿದ್ದಳು.
ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಟೀಕೆಗಳು ಬಂದಿದ್ವು. ನಾವು ಖಾಲಿ ಆದ್ರೆ ಬೆಂಗಳೂರಿನ ಗ್ಲಾಮರ್ ಖಾಲಿ ಆಗುತ್ತೆ ಅಂದಿದ್ದ ರೀಲ್ಸ್ ರಾಣಿ. ಈಗ ಅವಳೇ ಬೆಂಗಳೂರನ್ನು ಖಾಲಿ ಮಾಡುವ ಸ್ಥಿಇ ಬಂದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಈ ಲೇಡಿ ಲೈಕ್ಸ್ ಹುಚ್ಚಿಗೋ, ಫಾಲೋವರ್ಸ್ ಜಾಸ್ತಿ ಗಳಿಸುವ ಆಸೆಗೊ ನಾಲಿಗೆ ಹರಿಬಿಟ್ಟಿದ್ದಳು.
ಸುಗಂಧ ಶರ್ಮಾ ಮೇಲೆ ಕೊರಮಂಗಲದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದ್ದು. ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಆಕೆಯನ್ನು ಕೆಲಸದಿಂದ ತೆಗೆದು ಹಾಕಿದೆ.
ಉದ್ದ ನಾಲಿಗೆಯ ರೀಲ್ಸ್ ರಾಣ, ಈಗ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರು ಬಿಡುವ ದಿನಗಳು ಸನಿಹವಾಗಿವೆ.