newsics. com
ನವದೆಹಲಿ: ಅರೆಬರೆ ಬಟ್ಟೆಯಲ್ಲಿ ಕಾಣಿಸಿಕೊಂಡು ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್, ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಸ್ತನ ಕಸಿ ಮಾಡಿಸಿಕೊಳ್ಳಲು ಉರ್ಫಿ ಮುಂದಾಗಿದ್ದಾರೆನ್ನಲಾಗಿದೆ.
ಸ್ತನಗಳ ಇಂಪ್ಲಾಂಟ್ ಒಂದು ರೀತಿಯ ಪ್ಲಾಸ್ಟಿಕ್ ಸರ್ಜರಿ. ಸ್ತನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೂಲಕ ಅನೇಕರು ಸ್ತನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಇದು ಅತ್ಯಂತ ಸೂಕ್ಷವಾದ ಮತ್ತು ಅಪಾಯಕಾರಿ ಪ್ರಕ್ರಿಯೆ.
ಶಸ್ತ್ರಚಿಕಿತ್ಸೆಯ ಮೂಲಕ ಕೃತಕ ಸಾಧನಗಳನ್ನು ಸ್ತನಗಳಿಗೆ ಸೇರಿಸಲಾಗುತ್ತದೆ. ಸಿಲಿಕಾನ್ ಜೆಲ್ ಅಥವಾ ಸಲೈನ್‌ನಿಂದ ತುಂಬಿದ ಸಿಲಿಕಾನ್ ಚಿಪ್ಪುಗಳನ್ನು ಅಳವಡಿಸುವ ಪ್ರಕ್ರಿಯೆ ಇದು. ಕ್ಯಾನ್ಸರ್‌ನಿಂದ ಸ್ತನಗಳನ್ನು ಕಳೆದುಕೊಂಡವರು ಕೂಡ ಈ ರೀತಿಯ ಕಸಿ ಮಾಡಿಸಿಕೊಳ್ಳಬಹುದು. ಸ್ತನಗಳ ಗಾತ್ರ ಅಥವಾ ಆಕಾರವನ್ನು ಬದಲಾಯಿಸಲು ಬಯಸುವವರು ಸಹ ಇದನ್ನು ಮಾಡಿಸಿಕೊಳ್ಳುತ್ತಾರೆ. ಸ್ತನ ವೃದ್ಧಿಯನ್ನು ಬೂಬ್ ಜಾಬ್ ಎಂದೂ ಕರೆಯುತ್ತಾರೆ. ಯಾವುದೇ ರೀತಿಯ ದೈಹಿಕ ಸಮಸ್ಯೆಗಳಿದ್ದಲ್ಲಿ ಸ್ತನ ಕಸಿ ಮಾಡಿಸಿಕೊಳ್ಳುವುದು ಅಪಾಯಕಾರಿಯಾಗಿದೆ. ಸದ್ಯ ಈ ಸಾಹಸಕ್ಕೆ ಉರ್ಫಿ ಮುಂದಾಗಿದ್ದಾರೆನ್ನಲಾಗಿದ್ದು, ಆದರೆ ಯಾವಾಗ ಕಸಿ ಮಾಡಿಕೊಳ್ಳುತ್ತಾರೆನ್ನುವುದು ದೃಢವಾಗಿಲ್ಲ.