newsics.com
ಬೆಂಗಳೂರು: ತಿರುಪತಿ ಲಡ್ಡುವನ್ನು ರಾಜ್ಯದ ದೇವಸ್ಥಾನಗಳಲ್ಲಿ ಭಕ್ತರಿಗೆ ವಿತರಿಸದಿರಲು ಅಖಿಲ ಕರ್ನಾಟಕ ಅರ್ಚಕರ ಸಂಘವು ತೀರ್ಮಾನಿಸಿದೆ.
ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನೆಣ್ಣೆ ಸೇರಿದಂತೆ ಇನ್ನಿತರ ಕಲಬೆರಕೆ ಪದಾರ್ಥಗಳನ್ನು ಬಳಸಲಾಗಿದೆ ಎನ್ನುವ ವಿಚಾರದಿಂದ ಎಲ್ಲರೂ ಶಾಕ್ ಆಗಿದ್ದಾರೆ. ಈ ಗೊಂದಲದ ಬೆನ್ನಲ್ಲೇ ರಾಜ್ಯದ ಅರ್ಚಕರ ಸಂಘ ಮಹತ್ವದ ಈ ನಿರ್ಧಾರ ತೆಗೆದುಕೊಂಡಿದೆ.
ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಕಲಬೆರಕೆ ನಡೆದಿಲ್ಲ ಎನ್ನುವ ಬಗ್ಗೆ ಸ್ಪಷ್ಟತೆ ಸಿಗುವವರೆಗೂ ಪ್ರಸಾದವನ್ನು ನಾವು ಯಾರೂ ಬಳಸುವುದಿಲ್ಲ ಎಂದು ಸಂಘ ಪ್ರಕಟಣೆ ಹೊರಡಿಸಿದೆ.
ರಾಜ್ಯದ ಮುಖ್ಯ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಕಲ್ಯಾಣೋತ್ಸವ, ಮದುವೆ, ಗೃಹಪ್ರವೇಶ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ತಿರುಪತಿಯ ಲಡ್ಡು ಪ್ರಸಾದವನ್ನು ಪ್ರಧಾನವಾಗಿ ಬಳಕೆ ಮಾಡಲಾಗುತ್ತಿತ್ತು.
ನ್ಯಾಚುರಲ್ ಆಗಿಯೇ ನಿಮ್ಮ ಕಣ್ಣು ಶಾರ್ಪ್ ಆಗಿ ಕಾಣ್ಬೇಕಾ? ಈ ಟಿಪ್ಸ್ ಟ್ರೈ ಮಾಡಿ
ತಿನ್ನೋಕು, ಮಲಗೋಕು ಮಕ್ಕಳು ಫೋನ್ ಕೇಳ್ತಾರಾ? ಮೊಬೈಲ್ ಹುಚ್ಚು ಹೀಗೆ ಬಿಡಿಸಿ!