newsics.com
ಕೊಪ್ಪಳ: ರಾಜ್ಯದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆಗೆ ತಯಾರಿ ನಡೆಯುತ್ತಿದೆ. ಆದರೆ ಕೊಪ್ಪಳದಲ್ಲಿ ಈದ್ ಮಿಲಾದ್ ಬ್ಯಾನರ್ ನಲ್ಲಿ ಫ್ರೀ ಪ್ಯಾಲೆಸ್ತೇನ್ ಬರಹ ಹಾಕಲಾಗಿದ್ದು ಹಿಂದೂ ಸಂಘಟನೆಗಳ ವಿರೋಧದ ಬಳಿಕ ಫ್ರೀ ಪ್ಯಾಲೆಸ್ತೇನ್ ಬರಹಕ್ಕೆ ಪ್ಯಾಚ್ ಹಾಕಲಾಗಿದೆ.
ಬ್ಯಾನರ್ನ ಒಂದು ಭಾಗದಲ್ಲಿ ‘ಫ್ರೀ ಪ್ಯಾಲೆಸ್ತೇನ್’ ಬರಹ ಹಾಕಲಾಗಿತ್ತು. ಇದಕ್ಕೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಫ್ರೀ ಪ್ಯಾಲೆಸ್ತೇನ್ ಎಂಬ ಬರಹಕ್ಕೆ ಪ್ಯಾಚ್ ಹಾಕಿದ್ದಾರೆ.
ಇಂದು ಈದ್ ಮಿಲಾದ್ ಹಬ್ಬ ಆಚರಣೆ ಹಿನ್ನೆಲೆ ಕೊಪ್ಪಳ ಜಿಲ್ಲೆ ಗಂಗಾವತಿಯ ಕಿಲ್ಲಾ ಏರಿಯಾದಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಈ ಬ್ಯಾನರ್ನ ಒಂದು ಭಾಗದಲ್ಲಿ ಫ್ರೀ ಪ್ಯಾಲೆಸ್ತೇನ್ ಎಂದು ಬರೆಯಲಾಗಿತ್ತು. ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದ ಎಚ್ಚೆತ್ತ ಕಮಿಟಿ ಫ್ರೀ ಪ್ಯಾಲೆಸ್ತೇನ್ ಬರಹಕ್ಕೆ ಪ್ಯಾಚ್ ಹಾಕಿದೆ. ರಾತ್ರೋ ರಾತ್ರಿ ಬರಹಕ್ಕೆ ಪ್ಯಾಚ್ ಹಾಕಲಾಗಿದೆ.