newsics.com
ಮುಂಬೈ: ನತಾಶಾ ಸ್ಟಾಂಕೋವಿಕ್ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ಪರಸ್ಪರ ವಿಚ್ಚೇದನ ಪಡೆದು ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬಾಯ್ ಹೇಳಿದ್ದರು. ವಿಚ್ಛೇದನದ ನಂತ್ರ ಮೊದಲ ಬಾರಿಗೆ ಮಗನ ಭೇಟಿ ಯಾಗಿದ್ದಾರೆ.
ಸರ್ಬಿಯಾದಿಂದ ವಾಪಸ್ ಬಂದಿರುವ ನತಾಶಾ ತಮ್ಮ ಮಗ ಆಗಸ್ತ್ಯನನ್ನು ಆತನ ಅಪ್ಪನ ಮನೆಗೆ ಅಂದರೆ ಹಾರ್ದಿಕ್ ಪಾಂಡ್ಯಾ ಮನೆಗೆ ಬಿಟ್ಟು ಬಂದಿದ್ದಾರೆ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ ಅವರ ಸೋದರ ಕೃನಾಲ್ ಪಾಂಡ್ಯಾ ಪತ್ನಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತನ್ನ ಮಗ ಕಯಿರ್‌ನೊಂದಿಗೆ ನತಾಶಾ ಹಾಗೂ ಹಾರ್ದಿಕ್ ಪುತ್ರ ಆಗಸ್ತ್ಯನೂ ಇರುವುದನ್ನು ಕಾಣಬಹುದು. ಇಬ್ಬರನ್ನು ಮಡಿಲಿನಲ್ಲಿ ಕೂರಿಸಿಕೊಂಡು ಪಂಕುರಿ ಶರ್ಮಾ ಪುಸ್ತಕವನ್ನು ಮಕ್ಕಳಿಗೆ ಓದಿಸುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.
ಹಾರ್ದಿಕ್ ಪಾಂಡ್ಯನಿಗೆ ಮಗನ ಮಿಸ್ ಮಾಡ್ಕೋತಿರಬಹುದು. ಆತನಿಗೆ ಇನ್ನು ಮಗನನ್ನು ನೋಡಲು ಸಿಗಲ್ಲ ಎಂದೆಲ್ಲಾ ಬೇಸರ ವ್ಯಕ್ತಪಡಿಸಿದ್ದರು. ಆದರೆ ಈಗ ಹಾರ್ದಿಕ್ ಪುತ್ರ ಆಗಸ್ತ್ಯ ಮತ್ತೆ ಭಾರತಕ್ಕೆ ಬಂದಿದ್ದು, ಸದ್ಯ ಅಪ್ಪ ಹಾರ್ದಿಕ್ ಪಾಂಡ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ