newsics.com
ಹಿರಿಯ ನಟ ಕಿಚ್ಚ ಸುದೀಪ್ ಅವರಿಗೆ ಸೆಪ್ಟೆಂಬರ್ 2 ಜನ್ಮದಿನ. ಈ ಬಾರಿ ಸುದೀಪ್ ಮನೆಯ ಸಮೀಪ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಜನ ಬರುವುದರಿಂದ ತೊಂದರೆ ಆಗುತ್ತದೆ ಎಂದು ಅಕ್ಕ-ಪಕ್ಕದ ಮನೆಯವರು ದೂರಿದ್ದರು. ಈ ಕಾರಣಕ್ಕೆ ಬೇರೆ ಕಡೆ ಬರ್ತ್ಡೇ ಆಚರಣೆ ಮಾಡಲು ಸುದೀಪ್ ನಿರ್ಧರಿಸಿದ್ದಾರೆ.
ಈ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕಳೆದ ವರ್ಷದ ಬರ್ತ್ಡೇ ಸಂದರ್ಭದಲ್ಲಿ ಸಾಕಷ್ಟು ಗೊಂದಲ ಆಯ್ತು. ಅಕ್ಕಪಕ್ಕದ ಮನೆಯವರು ರಿಕ್ವೆಸ್ಟ್ ಮಾಡಿದ್ದರು. ಮನೆಯ ಬಳಿ ಆಚರಣೆ ಬೇಡ. ಜಯನಗರದಲ್ಲಿರುವ ಟೆಲಿಫೋನ್ ಎಕ್ಸ್ಚೇಂಜ್ ಎದುರು MES ಗ್ರೌಂಡ್ ಇದೆ. ಬೆಳಗ್ಗೆ 10 ಗಂಟೆಯಿಂದ 12ವರೆಗೆ ಇರುತ್ತೇನೆ. ಬರುವ ಸ್ನೇಹಿತರು ಅಲ್ಲಿ ಭೇಟಿ ಮಾಡುತ್ತೇನೆ. ಇದಾದಮೇಲೂ ಮನೆಯವರ ಬಳಿ ಬರುತ್ತಾರೆ. ಆದರೆ, ಅಲ್ಲಿ ಒಪ್ಪಿಗೆ ಇಲ್ಲ. ಎಂಇಎಸ್ ಗ್ರೌಂಡ್ನಲ್ಲೂ ಪ್ರೋಟೋಕಾಲ್ ಇದೆ’ ಎಂದಿದ್ದಾರೆ ಸುದೀಪ್.
‘ಕಳೆದ ಬಾರಿ ಬ್ಯಾರಿಕೇಡ್ ಒಡೆದು ಫ್ಯಾನ್ಸ್ ಬಂದಿದ್ದರು. ಅನೇಕರಿಗೆ ಭೇಟಿ ಸಾಧ್ಯವಾಗಿರಲಿಲ್ಲ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಈ ಬಾರಿ ಶಾಸಕ ಸಿಕೆ ರಾಮಮೂರ್ತಿ ಅವರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ’ ಎಂದು ಹೇಳಿದ್ದಾರೆ ಸುದೀಪ್.
‘ಕೇಕ್ ತರಬೇಡಿ. ಕಟ್ ಮಾಡಿದ ಮೇಲೆ ಅದರಷ್ಟು ಅನಾಥ ಮತ್ತೊಬ್ಬರು ಇಲ್ಲ. ಆ ತರಹ ಸಂಭ್ರಮ ಬೇಡ. ಆ ಹಣದಲ್ಲಿ ಯಾರಿಗಾದರೂ ಊಟ ಹಾಕಿ’ ಎಂದು ಕೋರಿದ್ದಾರೆ ಸುದೀಪ್.
ನಿರ್ಮಾಪಕರು, ನಿರ್ದೇಶಕರು ಇದ್ದಾರೆ. ಅವರು ನಿರ್ಧಾರ ಮಾಡುತ್ತಾರೆ. ಇಷ್ಟು ವರ್ಷ ಒಂದೇ ಸಿನಿಮಾ ಮಾಡಿಕೊಂಡು ಬರ್ತಾ ಇದ್ದೆ. 2-3 ಸಿನಿಮಾ ಒಟ್ಟಿಗೆ ಮಾಡ್ತೀನಿ. ನನಗೂ ಬೇಗ ಬರಬೇಕು ಎಂದಿದೆ. ಶೀಘ್ರವೇ ರಿಲೀಸ್ ಮಾಡುತ್ತೇವೆ. ಸಿನಿಮಾ ಕೆಲಸ ಕೊನೆಯ ಹಂತದಲ್ಲಿದೆ ಇದೆ’ ಎಂದು ನಟ ಸುದೀಪ್ ಹೇಳಿದ್ದಾರೆ.
ಇನ್ನು ದರ್ಶನ್ ಅರೆಸ್ಟ್ ಆದ ವಿಚಾರಕ್ಕೆ ಸಂಬಂಧಿಸಿದಂತೆಯೂ ಅವರು ಮಾತನಾಡಿದ್ದಾರೆ. ‘ನಾನು ಏನು ಹೇಳಬೇಕೋ ಅದನ್ನು ಮಾತನಾಡಿ ಆಗಿದೆ. ಅವರಿಗೆ ಅಂತ ಊರೆಲ್ಲ ಫ್ಯಾನ್ಸ್ ಇದಾರೆ. ಕುಟುಂಬದವರು ಇದ್ದಾರೆ. ನಾವು ಮಾತನಾಡುವುದರಿಂದ ಅವರಿಗೆ ಬೇಸರವಾಗುತ್ತದೆ. ಅಲ್ಲದೆ ಮತ್ತೊಂದು ಕುಟುಂಬ ಇದೆ. ಅವರಿಗೂ ನೋವಾಗಬಹುದು. ಸರ್ಕಾರ, ಕಾನೂನು ಇದೆ. ಅದನ್ನು ನಂಬಬೇಕು. ಪ್ರತಿಯೊಂದನ್ನೂ ನಂಬಬೇಕು’ ಎಂದು ಸುದೀಪ್ ಹೇಳಿದ್ದಾರೆ.
ಒಂದು ಪ್ಯಾಂಟ್ ₹1 ಲಕ್ಷ.. ಜಾಕೆಟ್ ರೇಟ್ ಲಕ್ಷ, ಲಕ್ಷ..; ದರ್ಶನ್ ದಿಲ್ದಾರ್ ದುನಿಯಾ