Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಭಾರತದಲ್ಲಿ ಭಾರೀ ರೈಲು ದುರಂತ ಸೃಷ್ಟಿಸಲು ರಾಮೇಶ್ವರಂ ಕೆಫೆ ಸ್ಫೋಟ ರೂವಾರಿ ಸೂಚನೆ!
ಕರ್ನಾಟಕಪ್ರಮುಖ

ಭಾರತದಲ್ಲಿ ಭಾರೀ ರೈಲು ದುರಂತ ಸೃಷ್ಟಿಸಲು ರಾಮೇಶ್ವರಂ ಕೆಫೆ ಸ್ಫೋಟ ರೂವಾರಿ ಸೂಚನೆ!

Share
2 Min Read
SHARE

newsics.com

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಸಂಚುಕೋರ ಎನ್ನಲಾದ ಪಾಕಿಸ್ತಾನ ಮೂಲದ ಭಯೋತ್ಪಾದಕ ಫರ್ಹತ್ತುಲ್ಲಾ ಗೋರಿ ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ಭಾರತೀಯ ನಗರಗಳಲ್ಲಿ ಬೃಹತ್ ಪ್ರಮಾಣದಲ್ಲಿ ರೈಲು ಹಳಿ ತಪ್ಪಿಸುವಂತೆ ತನ್ನ ಅನುಯಾಯಿಗಳಿಗೆ ಕರೆನೀಡಿದ್ದಾನೆ.

ಟೆಲಿಗ್ರಾಮ್‌ನಲ್ಲಿ ಬಿಡುಗಡೆಯಾದ‌ ಮೂರು ನಿಮಿಷಗಳ ವಿಡಿಯೋದಲ್ಲಿ ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ಭಾರತೀಯ ನಗರಗಳಲ್ಲಿ ಬೃಹತ್ ಪ್ರಮಾಣದಲ್ಲಿ ರೈಲು ಹಳಿ ತಪ್ಪಿಸುವಂತೆ ಸೂಚಿಸಿದ್ದಾನೆ.

ಗೋರಿಯ ಕರೆಯಿಂದ ಭಾರತೀಯ ರೈಲ್ವೇಗಳ ಮೇಲಿನ ಸಂಭಾವ್ಯ ದಾಳಿ ನಡೆಯದಂತೆ ಗುಪ್ತಚರ ಸಂಸ್ಥೆ ಪರಿಶೀಲಿಸುತ್ತಿದೆ. ಪ್ರಸ್ತುತ ಭಾರತಕ್ಕೆ ಬೇಜಾಗಿರುವ ಉಗ್ರರ ಪಟ್ಟಿಯಲ್ಲಿ ಫರ್ಹತ್ತುಲ್ಲಾ ಗೋರಿ ಟಾಪ್‌ ನಲ್ಲಿದ್ದಾನೆ. ತನ್ನ ಅನುಯಾಯಿಗಳಿಗೆ ಬಂದೂಕುಗಳ ಬಳಕೆಯನ್ನು ಮೀರಿ ಅಡಚಣೆಗಳನ್ನು ಉಂಟು ಮಾಡುವ ವಿವಿಧ ವಿಧಾನಗಳನ್ನು ತನ್ನ ಅನುಯಾಯಿಗಳಿಗೆ ವಿವರಿಸಿದ್ದಾನೆ.

ದೇಶದಲ್ಲಿ “ಅವ್ಯವಸ್ಥೆಯನ್ನು ಉಂಟುಮಾಡುವ” ಗುರಿಯೊಂದಿಗೆ ರೈಲು ಮಾರ್ಗಗಳು, ಪೆಟ್ರೋಲ್ ಪೈಪ್‌ಲೈನ್‌ಗಳು ಮತ್ತು ಲಾಜಿಸ್ಟಿಕಲ್ ಸರಪಣಿಗಳ ಮೇಲೆ ದಾಳಿ ಮಾಡುವಂತೆ ಆತ ಕರೆ ನೀಡಿರುವುದು ವಿಡಿಯೋದಲ್ಲಿ ಕಾಣುತ್ತಿದೆ.

ಪೆಟ್ರೋಲ್ ಪೈಪ್‌ಲೈನ್‌ಗಳು, ಅವುಗಳ ಲಾಜಿಸ್ಟಿಕ್ಸ್ ಸರಪಳಿ ಮತ್ತು ಸಹಯೋಗಗಳನ್ನು ಗುರಿಯಾಗಿಸಿಕೊಳ್ಳಿ. ರೈಲು ಮಾರ್ಗಗಳು, ಅವುಗಳ ಸಾರಿಗೆ ವ್ಯವಸ್ಥೆಯನ್ನು ಅಡ್ಡಿಪಡಿಸಿ. ಇವು ಅವ್ಯವಸ್ಥೆಯನ್ನು ಉಂಟುಮಾಡುತ್ತವೆ” ಎಂದು ಗೋರಿ ಘೋಷಿಸಿದ್ದಾನೆ.

ಭಾರತ ಸರ್ಕಾರವು ED ಮತ್ತು NIA ಮೂಲಕ ನಮ್ಮ ಆಸ್ತಿತ್ವವನ್ನು ಗುರಿಯಾಗಿಸುತ್ತಿದೆ, ಆದರೆ ದೃಢವಾಗಿರಿ, ನಾವು ಬೇಗ ಅಥವಾ ನಿಧಾನವಾಗಿಯಾದರು ಅಧಿಕಾರವನ್ನು ಕಸಿದುಕೊಳ್ಳುತ್ತೇವೆ” ಎಂದು ಭಾರತೀಯ ಗುಪ್ತಚರ ಸಂಸ್ಥೆಯ ಪಟ್ಟಿಯಲ್ಲಿರುವ ಭಯೋತ್ಪಾದಕ ಹೇಳಿದ್ದಾನೆ.

ಗೋರಿಯ ವಿಡಿಯೋ ಭಾಷಣದ ರೈಲು ಹಳಿ ತಪ್ಪಿಸುವ ಹೇಳಿಕೆಯು ಭಾರತೀಯ ಭದ್ರತಾ ಸಂಸ್ಥೆಗಳನ್ನು ಎಚ್ಚರಿಸಿದೆ, ಆಗಸ್ಟ್ 23 ಮತ್ತು 24 ರಂದು, ವಂದೇ ಭಾರತ್ ರೈಲನ್ನು ಹಳಿತಪ್ಪಿಸುವ ಪ್ರಯತ್ನ ನಡೆದಿತ್ತು. ಸಿಮೆಂಟ್ ಬ್ಲಾಕ್‌ಗಳನ್ನು ಹಳಿಗಳ ಮೇಲೆ ಇರಿಸಲಾಗಿತ್ತು ಎಂದು ವರದಿಯಾಗಿದೆ,

ಮೂರು ನಿಮಿಷಗಳ ವೀಡಿಯೊದಲ್ಲಿ, ಗೋರಿ “ಫಿಡಾಯೀನ್ ಯುದ್ಧ” ಅಥವಾ ಆತ್ಮಹತ್ಯಾ ದಾಳಿಗೆ ಕರೆ ನೀಡಿದ್ದಾನೆ. ಅತನ ಅನುಯಾಯಿಗಳು ಹಿಂದೂ ಮುಖಂಡರು ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಳ್ಳುವಂತೆ ಹೇಳಿದ್ದಾನೆ.

ಮೂಲತಃ ಹೈದರಾಬಾದ್‌ನವನಾದ ಗೋರಿಯನ್ನು 2022 ರಲ್ಲಿ ಭಾರತೀಯ ಗೃಹ ಸಚಿವಾಲಯವು ಭಯೋತ್ಪಾದಕ ಎಂದು ಗೊತ್ತುಪಡಿಸಿತು. ಆತ ಪಾಕಿಸ್ತಾನದ ಲಾಹೋರ್‌ನಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.

ಯಾವುದೇ ಡ್ರೆಸ್ ತೊಟ್ಟರೂ ಹೆಣ್ಮಕ್ಕಳತ್ತ ಕೆಟ್ಟ ನೋಟ: ಪುರುಷರಿಗೆ ಯಾಕಿಂಥ ಮನಸ್ಥಿತಿ?

ಪ್ರಿಯಕರನಿಗಾಗಿ ಹೆತ್ತ ಕಂದಮ್ಮನನ್ನೇ ಕೊಂದ ಪಾಪಿ ತಾಯಿ

ಕೋಲಾರ, ಹೊಸೂರು ಟಾಟಾ ಪ್ಲ್ಯಾಂಟ್‌ಗಳಲ್ಲಿ ಉತ್ತರಾಖಂಡದ 4 ಸಾವಿರ ಮಹಿಳೆಯರಿಗೆ‌ ಉದ್ಯೋಗ

TAGGED:Rameswaram cafe blast warning to create massive train disaster in India!
Share This Article
Facebook Twitter Copy Link Print
Previous Article ಲವರ್ಸ್‌ ಎಂದು ಭಾವಿಸಿ ಸ್ವಂತ ಅಣ್ಣ-ತಂಗಿಯನ್ನೇ ಜೈಲಿಗೆ ಹಾಕಿದ ಪೊಲೀಸ್‌
Next Article ಕುರ್ಚಿಗೆ ಕಟ್ಟಿ ಹಾಕಿ ಚಿತ್ರಹಿಂಸೆ ಕೊಟ್ಟು ಬೆಂಗಳೂರಲ್ಲಿ ಮಹಿಳೆಯ ಕೊಲೆ

Popular Posts

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

You Might Also Like

ದೇಶಪ್ರಮುಖ

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?