newsics.com
ಉತ್ತರಪ್ರದೇಶ: ಇಲ್ಲೊಬ್ಳು ಸೊಸೆ ಎಲ್ಲಾ ಎಲ್ಲೆಗಳನ್ನೂ ಮೀರಿ ಹಿರಿಯರು ಎಂಬುದನ್ನೂ ನೋಡದೆ ತನ್ನ ಅತ್ತೆಯ ಮೇಲೆಯೇ ಅಮಾನುಷವಾಗಿ ಹಲ್ಲೆ ನಡೆಸಿದ್ದಾಳೆ.
ಈಕೆಯ ಕ್ರೌರ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ರಾಯ್ ಬರೇಲಿಯ ಲಾಲ್ ಗಂಜ್ ಕೊತ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಾಟಿ ಸೊಸೆಯೊಬ್ಬಳು ವಯಸ್ಸಾದ ಅತ್ತೆಯ ಮೇಲೆ ಹಲ್ಲೆ ನಡೆಸಿ ಅಮಾನವೀಯ ಕೃತ್ಯ ಮೆರೆದಿದ್ದಾಳೆ. ಈಕೆಯ ಮೃಗೀಯ ವರ್ತನೆಯ ವಿಡಿಯೋವನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ವೃದ್ಧೆಗೆ ಚಿತ್ರಹಿಂಸೆ ನೀಡಿದ ಸೊಸೆಯ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಲಾಲ್ಗಂಜ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಭರವಸೆ ನೀಡಿದ್ದಾರೆ.
https://twitter.com/BhargavaPriyash/status/1827310741843800454