newsics.com
ಗಂಡ ಸಮಯಾನೇ ಕೊಡಲ್ಲ ಎನ್ನುವುದು ಬಹಳಷ್ಟು ಮಹಿಳೆಯರ ಆರೋಪ. ಹಾಗಿದ್ದರೆ ಗಂಡ ನಿಮಗೆ ಸಮಯ ಕೊಡುವಂತೆ ಮಾಡಲು ಈ ರೀತಿ ಮಾಡಿ.
ಪುರುಷರು ಮಾತುಗಳು, ಭಾವನೆಗಳನ್ನು ಕೇಳುವುದಕ್ಕಿಂತ, ಮಾತುಗಳಿಗೆ ಸೋತು ನಿಮ್ಮ ಹಿಂದಿಂದೆ ಬರುವುದಕ್ಕಿಂತ ನಿಮ್ಮ ಲುಕ್ನಿಂದ ಬೇಗ ಪ್ರಭಾವಿತರಾಗುತ್ತಾರೆ. ಹಾಗಾಗಿ ನೀವು ನಿಮ್ಮ ಪತಿಗಾಗಿ ಕಾಳಜಿಯಿಂದ ರೆಡಿಯಾಗುವುದು ಅಗತ್ಯ. ಸ್ವಲ್ಪ ಹೆಚ್ಚು ಗಮನ ವಹಿಸಿ ಪತಿಗಾಗಿ ರೊಮ್ಯಾಂಟಿಕ್ ಆಗಿ ರೆಡಿಯಾಗಿ.
ನಿಮ್ಮನ್ನು ನೋಡಿದ ನಂತರ ನಿಮ್ಮ ಪತಿ ನಿಮ್ಮಿಂದ ಕಣ್ಣು ತೆಗೆಯಬಾರದು. ಆ ರೀತಿಯಲ್ಲಿ ರೆಡಿಯಾಗಿ. ಇನ್ನು ಮನೆಯಲ್ಲಿ ಪತಿ ಮಾತ್ರ ಇದ್ದರೆ ಹೆಚ್ಚು ರಿವೀಲಿಂಗ್ ಡ್ರೆಸ್, ನೈಟ್ ವೇರ್, ನೆಟ್ ಡ್ರೆಸ್ ಧರಿಸಿ ನಿಮ್ಮ ಪತಿಯನ್ನು ಆಕರ್ಷಿಸಿ. ಇದು ನಿಮ್ಮ ಪತಿಯನ್ನು ತಕ್ಷಣ ಮೋಡಿ ಮಾಡುತ್ತದೆ. ಇದಲ್ಲದೆ ಇನ್ನೂ ಒಂದು ಸೂಪರ್ ಟೆಕ್ನಿಕ್ ಇದೆ.
ಸಾಮಾನ್ಯವಾಗಿ ರೊಮ್ಯಾನ್ಸ್ಗೆ ಮೊದಲು ನೀವು ಪರ್ಫ್ಯೂಮ್ ಹಚ್ಚುತ್ತಿರಬಹುದು. ಆದರೆ ಅದನ್ನು ಸರಿಯಾಗಿ ಹಚ್ಚುವುದು ತುಂಬಾ ಅಗತ್ಯ, ಯಾಕೆಂದರೆ ರೊಮ್ಯಾನ್ಸ್ನಲ್ಲಿ ನಿಮ್ಮ ದೇಹದ ಸುಗಂಧ ತುಂಬಾ ಮುಖ್ಯ. ನಿಮ್ಮ ದೇಹದ ಪರಿಮಳವೇ ನಿಮ್ಮ ಗಂಡನನ್ನು ನಿಮ್ಮತ್ತ ಹೆಚ್ಚು ಸೆಳೆಯುತ್ತದೆ.
ನೀವು ಸ್ನಾನ ಮಾಡುವಾಗ ಯಾವುದಾದರೂ ಸುವಾಸನೆಯುಕ್ತ ಬಾಡಿವಾಶ್ ಬಳಸಿ. ಅಥವಾ ಶವರ್ ಜೆಲ್ ಬಳಸಿ. ಹದವಾದ ಬಿಸಿ ನೀರಿನಿಂದ ಸ್ನಾನ ಮಾಡಿ. ಇದು ನಿಮ್ಮ ದೇಹದಲ್ಲಿ ಸುಗಂಧ ಉಳಿಯಲು ನೆರವಾಗುತ್ತದೆ. ಸ್ನಾನ ಆದ ನಂತರ ಒದ್ದೆ ತೆಗೆದು ಬಾಡಿ ಮಾಯ್ಚಿರೈಸರ್ ಹಚ್ಚಿ.
ಪರ್ಫ್ಯೂಮ್ ಹಚ್ಚುವ ಮೊದಲು ಮಾಯ್ಚಿರೈಸರ್ ಹಚ್ಚಿದರೆ ಸುಗಂಧ ಹೆಚ್ಚು ಕಾಲ ಉಳಿಯುತ್ತದೆ. ಕಂಕುಳಲ್ಲಿ, ನೆಕ್ ಸೈಡ್, ಎದೆಯ ಭಾಗದಲ್ಲಿ, ಸಾಮಾನ್ಯವಾಗಿ ನೀವು ಪರ್ಫ್ಯೂಮ್ ಹಾಕಬಹುದು. ಅದಲ್ಲದೆ ಹೇರ್ ಸ್ಪ್ರೇ ಕೂಡಾ ಬಳಸಿ. ಇದು ಸಾಮಾನ್ಯವಾಗಿ ಬಹುತೇಕರು ಫಾಲೋ ಮಾಡುವ ವಿಧಾನ.
ಹೆಂಡ್ತೀರು ಈ ರೀತಿ ಮಾಡಿದ್ರೆ ಗಂಡನ ಮೂಡ್ ಏನಾಗುತ್ತೆ?