newsics.com
ಆಂಧ್ರಪ್ರದೇಶ : ಎನ್‌ಡಿ ಎ ಸರ್ಕಾರ 2019-2024ರ ಅವಧಿಯಲ್ಲಿ ಹೊರಡಿಸಲಾದ ಹಿಂದಿನ ಸರ್ಕಾರದ ಬಿಲ್‌ಗಳನ್ನು ಬಹಿರಂಗಪಡಿಸುವ ಮೂಲಕ ಜಗನ್ ಅವರ ಸರ್ಕಾರವು ಹೇಗೆ ಕೋಟಿಗಟ್ಟಲೆ ಹಣವನ್ನು ಬಹಿರಂಗವಾಗಿ ಲೂಟಿ ಮಾಡಿದೆ ಎಂಬುದನ್ನ ಬಹಿರಂಗ ಪಡಿಸಿದೆ.
ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮೊಟ್ಟೆ ಪಫ್ ನೀಡಲು ಕಳೆದ ಐದು ವರ್ಷಗಳಲ್ಲಿ ಸರ್ಕಾರ 3.62 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂಬುದು ಬೆಳಕಿಗೆ ಬಂದಿದೆ.
ಸಿಎಂ ಕಚೇರಿ ಸಿಬ್ಬಂದಿಗೆ ಮೊಟ್ಟೆ ಪಫ್ಸ್ಗಾಗಿಯೇ ಸರ್ಕಾರವು ವರ್ಷಕ್ಕೆ ಸರಾಸರಿ 72 ಲಕ್ಷಗಳನ್ನು ಖರ್ಚು ಮಾಡಿದೆ. ಇದರರ್ಥ ಸಿಎಂಒ ಸಿಬ್ಬಂದಿ ಪ್ರತಿದಿನ 993 ಎಗ್ ಪಫ್‌ಗಳನ್ನು ತಿಂದಿ ತೇಗಿದ್ದಾರೆ. ಐದು ವರ್ಷಗಳಲ್ಲಿ ಒಟ್ಟು 18 ಲಕ್ಷ ಎಗ್ ಪಫ್‌ಗಳನ್ನು ಜಗನ್ ಕಚೇರಿಯ ಸಿಬ್ಬಂದಿ ಸೇವಿಸಿದ್ದಾರೆ ಎಂದು ಹೊಸ ಸರ್ಕಾರ ದಾಖಲೆ ಬಿಡುಗಡೆ ಮಾಡಿದೆ.
ಸಿಎಂಒ ಸಿಬ್ಬಂದಿಗೆ ಎಗ್ ಪಫ್ ನೀಡುವುದಕ್ಕಾಗಿ ಇಷ್ಟೊಂದು ಖರ್ಚು ಮಾಡಿರುವುದು ರಾಜ್ಯದ ಜನತೆಗೆ ಆಘಾತವನ್ನು ಉಂಟುಮಾಡಿದೆ.
ಆಂಧ್ರಪ್ರದೇಶದಲ್ಲಿ ಈ ಬಾರಿ ಎನ್ಡಿಎ ಸರ್ಕಾರ ಅಧಿಕಾರ ಬಂದಿದ್ದು, ಕಳೆದ ಐದು ವರ್ಷಗಳಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಸಿಎಂ ಕಚೇರಿ ಸಿಬ್ಬಂದಿ ತಮ್ಮ ಸ್ಥಾನ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಹಲವಾರು ಆರೋಪಗಳ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಿದೆ.