Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಅರೆಪ್ರಜ್ಞಾವಸ್ಥೆಯಲ್ಲಿದ್ದ ಬೆಂಗಳೂರು ಪದವಿ ವಿದ್ಯಾರ್ಥಿನಿ ಮೇಲೆ ನಡೆಯಿತಾ ಸಾಮೂಹಿಕ ಅತ್ಯಾಚಾರ ಯತ್ನ? ಯುವತಿ ಸ್ಥಿತಿ ಗಂಭೀರ, ಗೃಹಸಚಿವರು ಹೇಳಿದ್ದೇನು?
ಕರ್ನಾಟಕಪ್ರಮುಖ

ಅರೆಪ್ರಜ್ಞಾವಸ್ಥೆಯಲ್ಲಿದ್ದ ಬೆಂಗಳೂರು ಪದವಿ ವಿದ್ಯಾರ್ಥಿನಿ ಮೇಲೆ ನಡೆಯಿತಾ ಸಾಮೂಹಿಕ ಅತ್ಯಾಚಾರ ಯತ್ನ? ಯುವತಿ ಸ್ಥಿತಿ ಗಂಭೀರ, ಗೃಹಸಚಿವರು ಹೇಳಿದ್ದೇನು?

Share
2 Min Read
SHARE

newsics.com

ಬೆಂಗಳೂರು: ಕೋಲ್ಕತ್ತಾ ವೈದ್ಯ ವಿದ್ಯಾರ್ಥಿನಿಯನ್ನು ಅತ್ಯಚಾರಗೈದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲಿಯೇ ಬೆಂಗಳೂರಿನಲ್ಲಿ ಪದವಿ ವಿದ್ಯಾರ್ಥಿನಿಯನ್ನು ಆಟೋದಲ್ಲಿ ಕರೆದೊಯ್ದು ಅತ್ಯಾಚಾರ ಮಾಡಿ ಬಿಸಾಡಿರುವ ಘಟನೆ ನಡೆದಿದೆ.

ಸಾಮೂಹಿಕ ಅತ್ಯಾಚಾರಕ್ಕೂ ಯತ್ನ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಗೃಹಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದು, ಸಾಮೂಹಿಕ ಅತ್ಯಾಚಾರಕ್ಕೆ ಯತ್ನ ನಡೆದಿರುವುದು ನಿಜ ಎಂದಿದ್ದಾರೆ. ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಹೆಚ್ಎಸ್‌ಆರ್ ಲೇಔಟ್‌ನಲ್ಲಿ ಅತ್ಯಾಚಾರ ಪ್ರಯತ್ನ ಆಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಂತ್ರಸ್ತ ಯುವತಿ ದೂರು ನೀಡಿದ್ದಾರೆ. ಅದು ಮೆಡಿಕಲ್ ಟೆಸ್ಟ್ ನಡೆಯುತ್ತಿದೆ. ಗ್ಯಾಂಗ್ ರೇಪ್ ಪ್ರಯತ್ನ ಇಲ್ಲಿ ನಡೆದಿದರೋದು ನಿಜ. ಪ್ರೊಸೀಜರ್ ಏನಾಗಿದೆ ಎಂದು ನೋಡಬೇಕು. ನಂತರವೇ ಬಗ್ಗೆ ಪೂರ್ಣ ಮಾಹಿತಿ ನೀಡಲಾಗುತ್ತದೆ. ಸದ್ಯಕ್ಕೆ ಸಂತ್ರಸ್ತ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದ್ದು, ಯುವತಿಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರೇಪ್ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಸಂತ್ರಸ್ತ ವಿದ್ಯಾರ್ಥಿನಿ ಖಾಸಗಿ ಕಾಲೇಜಿನಲ್ಲಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಳು.

ಆಸ್ಪತ್ರೆ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಘಟನೆಯ ಬಗ್ಗೆ ಸಂತ್ರಸ್ತೆ ಯುವತಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ದೂರು ನೀಡಿದ್ದಾಳೆ.

ಯುವತಿಯ ದೂರನ್ನು ಆಧರಿಸಿ ಪೊಲೀಸರು ಸಂಬಂಧಪಟ್ಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಭಾನುವಾರ ಬೆಳಗ್ಗೆ ಘಟನೆ ಸಂಬಂಧ ಹೆಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಸದ್ಯ ಸಂತ್ರಸ್ತೆಗೆ ಮೆಡಿಕಲ್ ಟೆಸ್ಟ್ ಮಾಡಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಹೆಚ್ ಎಸ್ ಆರ್ ಲೇಔಟ್ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.

ನಿನ್ನೆ ರಾತ್ರಿ ವೇಳೆ ಅತ್ಯಾಚಾರ ಸಂತ್ರಸ್ತೆ ಯುವತಿ ಕೋರಮಂಗಲದ ಪಬ್ ಒಂದರಲ್ಲಿ ಸ್ನೇಹಿತರ ಜತೆ ಪಾರ್ಟಿ ಮಾಡಿದ್ದಾಳೆ. ಬಳಿಕ ಕಾರಿನಲ್ಲಿ ಸ್ನೇಹಿತರ ಜತೆ ಮನೆಗೆ ಹೊರಟಿರುವಾಗ, ತಾನು ಆಟೋದಲ್ಲಿ ಮನೆಗೆ ಹೋಗುವುದಾಗಿ ಕಾರಿನಿಂದ ಇಳಿದಿದ್ದಾಳೆ.

ಕೋರಮಂಗಲದ ಎನ್.ಎಂ.ಜಿ ಜಂಕ್ಷನ್ ಬಳಿ ಕಾರಿನಿಂದ ಇಳಿದು ಆಟೋ ಹತ್ತಿ ಮನೆಯತ್ತ ಹೋಗುವುದಾಗಿ ಕಾರಿನಲ್ಲಿದ್ದ ಸ್ನೇಹಿತರನ್ನು ಕಳಿಸಿದ್ದಾಳೆ. ಈ ವೇಳೆ ಯುವತಿ ಮೈಮೇಲೆ ಪ್ರಜ್ಞೆ ಇಲ್ಲದ ರೀತಿ ಓಲಾಡುತ್ತಿದ್ದು, ಮನೆಯ ಅಡ್ರೆಸ್ ಹೇಳಿ ಆಟೋದಲ್ಲಿಯೇ ಮಲಗಿದ್ದಾಳೆ.

ಈ ವೇಳೆ ಯುವತಿಗೆ ಪ್ರಜ್ಞೆ ಇಲ್ಲದಿರುವುದನ್ನು ನೋಡಿದ ಆಟೋ ಚಾಲಕ ಯುವತಿ ಮೇಲೆ ಆಟೋದಲ್ಲಿ ಆತ್ಯಾಚಾರಕ್ಕೆ ಯತ್ನ ಮಾಡಿದ್ದಾನೆ. ಬಳಿಕ ಆಟೋ ಚಾಲಕ ಹೆಚ್ ಎಸ್ ಆರ್ ಲೇಔಟ್ ಕಡೆ ಹೋಗಿದ್ದಾನೆ. ಅಲ್ಲಿ ಅತ್ಯಾಚಾರ ಕಿರುಕುಳ ನೀಡಿ, ಅಲ್ಲಿಂದ ಹೆಬ್ಬಗೋಡಿ ಕಡೆ ಆಕೆಯನ್ನು ಕರೆದುಕೊಂಡು ಹೋಗಿ ಬಿಸಾಡಿದ್ದಾರೆ.

ಯುವತಿ ಹೆಬ್ಬಗೋಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೋರಮಂಗಲ ಪೊಲೀಸರು ನಮ್ಮ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ. ಗಡಿ ವಿಚರವಾಗಿ ಕೋರಮಂಗಲ ಪೊಲೀಸರು ಹಾಗೂ ಎಚ್ ಎಸ್ ಆರ್ ಲೇಔಟ್ ಪೊಲೀಸರ ನಡುವೆ ಜಟಾಪಟಿಯೂ ನಡೆದಿದೆ. ಬಳಿಕ ಡಿಸಿಪಿ ಸೂಚನೆ ಮೇರೆಗೆ ಹೆಚ್‌ಎಸ್‌ಆರ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.

TAGGED:Graduate student raped by auto driver in Bangalorevictim admitted to hospital
Share This Article
Facebook Twitter Copy Link Print
Previous Article ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್!
Next Article ಬಸ್- ಕಾರು ಡಿಕ್ಕಿ: ಒಂದೇ ಕುಟುಂಬದ ನಾಲ್ವರ ಸಾವು

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?