newsics. com
ಲಂಡನ್ : ಲಂಡನ್ ಫುಟ್ಪಾತ್ನಲ್ಲಿ ವಿರಾಟ್ ಕೊಹ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.
ಸದ್ಯ ಕೊಹ್ಲಿ ತನ್ನ ಪತ್ನಿ ಅನುಷ್ಕಾ ಹಾಗೂ ಇಬ್ಬರೂ ಮಕ್ಕಳೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಶ್ರೀಲಂಕಾ ಪ್ರವಾಸ ಮುಗಿದೊಡನೆ ಕೊಹ್ಲಿ ಲಂಡನ್ಗೆ ತೆರಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಿಂಗ್ ಕೊಹ್ಲಿ ಸಾಮಾನ್ಯ ವ್ಯಕ್ತಿಯಂತೆ ಲಂಡನ್ನ ಅದ್ಯಾವುದೋ ಫುಟ್ಬಾತ್ ಮೇಲೆ ರಸ್ತೆ ದಾಟುವುದಾಕ್ಕಾಗಿ ನಿಂತಿರುವುದನ್ನು ಕಾಣಬಹುದಾಗಿದೆ.
2024 ರ ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ವಿರಾಮ ತೆಗೆದುಕೊಂಡಿದ್ದರು. ಆ ಬಳಿಕವೂ ಶ್ರೀಲಂಕಾ ಪ್ರವಾಸದಿಂದ ಕೊಹ್ಲಿ ರಜೆ ಕೇಳಿದ್ದರು. ಆದರೆ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್, ಈ ಸರಣಿಯಲ್ಲಿ ಆಡುವಂತೆ ಕೊಹ್ಲಿ ಹಾಗೂ ರೋಹಿತ್ಗೆ ಹೇಳಿದ್ದರು. ಹೀಗಾಗಿ ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಕೊಹ್ಲಿ ತಂಡದ ಪರ ಕಣಕ್ಕಿಳಿದಿದ್ದರು. ಆದರೆ ಆಡಿದ ಮೂರು ಪಂದ್ಯಗಳಲ್ಲೂ ಕೊಹ್ಲಿ ವಿಶೇಷ ಪ್ರದರ್ಶನವನ್ನೇನೂ ನೀಡಲಿಲ್ಲ.
https://x.com/KohliSensation/status/1823776942144868708?t=emNcuXiLPUHMQ4HaNZuaGw&s=19