Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಟೇಸ್ಟ್ > ಇಂದು ವರಮಹಾಲಕ್ಷ್ಮಿ ಹಬ್ಬ: ದೇವಿಯ ನೈವೇದ್ಯಕ್ಕೇನು ಖಾದ್ಯ?
ಟೇಸ್ಟ್

ಇಂದು ವರಮಹಾಲಕ್ಷ್ಮಿ ಹಬ್ಬ: ದೇವಿಯ ನೈವೇದ್ಯಕ್ಕೇನು ಖಾದ್ಯ?

Share
2 Min Read
SHARE

newsics.com
ಶ್ರಾವಣ ಮಾಸವೆಂದರೆ ಮನೆ-ಮನಗಳಲ್ಲಿ ಅದೇನೋ ಸಡಗರ, ಸಂಭ್ರಮ. ಪ್ರಕೃತಿಯಲ್ಲೂ ಹಚ್ಚಹಸಿರು. ಮನೆಗಳಲ್ಲೂ ತಳಿರು ತೋರಣ ಕಟ್ಟುವ ಸಾಲು ಸಾಲು ಹಬ್ಬ.

ಇಂದು (ಆಗಸ್ಟ್ 16) ವರಮಹಾಲಕ್ಷ್ಮಿ ಹಬ್ಬ. ಹೆಂಗಳೆಯರು, ಮುತ್ತೈದೆಯರು ಬಹಳ ಭಕ್ತಿಯಿಂದ ಆಚರಿಸುವ ಈ ಹಬ್ಬದಲ್ಲಿ ದೇವಿಯ ಆರಾಧನೆ ಮಾಡುತ್ತಾರೆ. ಸದಾ ಮುತ್ತೈದೆಯಾಗಲಿ ಎಂದು ಬೇಡಿಕೊಳ್ಳುತ್ತಾರೆ. ಪ್ರತಿ ಮನೆ ಮನೆಯಲ್ಲೂ ಪೂಜೆ ನಡೆಯುತ್ತದೆ.

ಈ ವರಮಹಾಲಕ್ಷ್ಮಿ ಹಬ್ಬದಂದು ದೇವಿಗೆ ನೈವೇದ್ಯ ಮಾಡಬಹುದಾದ ಅನ್ನದ ಖಾದ್ಯಗಳ ರೆಸಿಪಿ ಇಲ್ಲಿದೆ. ಅನ್ನ ಮಾಡಿಕೊಳ್ಳಿ ಅದರಿಂದಲೇ ಇನ್ನೂ ನಾಲ್ಕು ವಿಧದ ಭಕ್ಷಗಳನ್ನು ತಯಾರಿಸಬಹುದು.

ಅಕ್ಕಿ ಪಾಯಸ:

ಒಂದು ಸ್ವಲ್ಪ ಅನ್ನಕ್ಕೆ ಬೆಲ್ಲ ಚಿಟಿಕೆ ಉಪ್ಪು ಹಾಗೂ ಬೇಯಿಸಿದ ಕಡಲೆ ಬೇಳೆ ಹಾಕಿ ಚೆನ್ನಾಗಿ ಸ್ಮಾಷ್ ಆಗುವ ರೀತಿ ಮಿಕ್ಸ್‌ ಮಾಡಿಕೊಳ್ಳಿ. ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಸೇರಿಸಿದರೆ ಅಕ್ಕಿ ಪಾಯಸ ರೆಡಿ.

ಪುಳಿಯೋಗರೆ:
ಅನ್ನವನ್ನು ಅರ್ಧ ಪಾಯಸಕ್ಕೆ ಬಳಸಿದರೆ ಈಗ ಇನ್ನೊಂದು ಅರ್ಧ ಪುಳಿಯೋಗರೆ ಮಾಡಲು ಬಳಸಿಕೊಳ್ಳಬಹುದು. ಪುಳಿಯೋಗರೆ ಪೌಡರ್‌ನ್ನು ಎಣ್ಣೆಯಲ್ಲಿ ಮಿಕ್ಸ್ ಮಾಡಿ ಬಿಸಿಯಾದ ನಂತರ ಅದನ್ನು ಅನ್ನಕ್ಕೆ ಹಾಕಿ. ಅನ್ನಕ್ಕೆ ಉಪ್ಪು ಹಾಗೂ ಸಕ್ಕರೆಯನ್ನು ರುಚಿಗೆ ತಕ್ಕಂತೆ ಮಿಕ್ಸ್ ಮಾಡಿ ಚೆನ್ನಾಗಿ ಮಿಶ್ರಣ ಮಾಡಿದರೆ ಪುಳಿಯೋಗರೆ ಸಿದ್ಧ.

ಕೋಕೋನಟ್ ರೈಸ್:
ಅನ್ನ ತಣ್ಣಗಾಗಲು ಬಿಡಿ. ನಂತರ ಒಗ್ಗರಣೆ ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಗೂ ಸ್ವಲ್ಪ ಎಣ್ಣೆ ಮಿಕ್ಸ್ ಮಾಡಿ. ನಂತರ ಗೋಡಂಬಿ, ಕಡಲೆ ಬೇಳೆ, ಉದ್ದಿನ ಬೇಳೆ ಹಾಗೂ ಕರಿಬೇವಿನ ಸೊಪ್ಪು ಇವೆಲ್ಲವನ್ನೂ ಹಾಕಿ. ಹಸಿಮೆಣಸು ಹಾಕಿ. ಇದರ ಘಮ ಹರಡಿದ ಮೇಲೆ ಅದನ್ನು ಅನ್ನಕ್ಕೆ ಹಾಕಿ ಮೇಲಿಂದ ಉಪ್ಪು ಹಾಗೂ ತೆಂಗಿನ ತುರಿಯನ್ನು ಉದುರಿಸಿ ಮಿಕ್ಸ್ ಮಾಡಿದರೆ ಕೊಕೊನಟ್ ರೈಸ್ ರೆಡಿ.

ಚಿತ್ರಾನ್ನ:
ಮೊದಲಿಗೆ ಒಂದಷ್ಟು ಅನ್ನವನ್ನು ತೆಗೆದುಕೊಳ್ಳಿ. ನಂತರ ಒಗ್ಗರಣೆ ಹಾಕಿ. ಒಗ್ಗರಣೆಗೆ ಸಾಸಿವೆ, ಜೀರಿಗೆ ಇಂಗು, ಕರಿಬೇವಿನ ಸೊಪ್ಪನ್ನು ಬಳಸಿ. ನಂತರ ಇದನ್ನು ಅನ್ನಕ್ಕೆ ಹಾಕಿ ನಂತರ ಮೇಲಿನಿಂದ ಉಪ್ಪು, ರುಚಿಗೆ ತಕ್ಕಷ್ಟು ಸಕ್ಕರೆ ಹಾಗೆ ಲಿಂಬುರಸ ಸೇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಈಗ ಚಿತ್ರಾನ್ನ ಸವಿಯಲು ಸಿದ್ಧ.

ಹೆಸರುಕಾಳು ಉಸುಳಿ:
ಹೆಸರುಕಾಳನ್ನು ಚೆನ್ನಾಗಿ ಲ ಬೇಯಿಸಿಕೊಳ್ಳಿ. ಅದನ್ನು ಐದರಿಂದ ಆರು ಸೀಟಿ ಕೂಗಿಸಿಕೊಳ್ಳಿ. ಅದಕ್ಕೆ ಕಾಯಿತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇನ್ನೊಂದು ಪಾತ್ರೆಯಲ್ಲಿ ಒಗ್ಗರಣೆ ಮಾಡಿ. ಎಣ್ಣೆ, ಅರಿಶಿನ, ಸಾಸಿವೆ, ಜೀರಿಗೆ ಹಾಗೂ ಹಸಿಮೆಣಸಿನಕಾಯಿಯನ್ನು ಬೇಯಿಸಿದ ಹೆಸರು ಕಾಳಿಗೆ ಮಿಕ್ಸ್ ಮಾಡಿ. ಹೆಸರುಕಾಳಿನ ಉಸುಳಿಗೆ ಅಗತ್ಯವೆನಿಸಿದರೆ ಸ್ವಲ್ಪ ಬೆಲ್ಲ ಸೇರಿಸಿಕೊಳ್ಳಬಹುದು.

ಹಸಿ ಹಾಲನ್ನು ಕಾಯಿಸದೆ ಕುಡಿದರೆ ಏನಾಗುತ್ತೆ..?

TAGGED:Varamahalakshmi festival today: What food to offer to the goddess?
Share This Article
Facebook Twitter Copy Link Print
Previous Article ದಿನ ಭವಿಷ್ಯ 16-08-2024 ಶುಕ್ರವಾರ, ಕನ್ಯಾ- ಸಾಲದ ಒತ್ತಡ ಹೆಚ್ಚಳ, ಮೀನ- ಆಪ್ತರಿಂದ ಆರ್ಥಿಕ ನೆರವು, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?
Next Article ಲಂಡನ್ ಫುಟ್ಪಾತ್ನಲ್ಲಿ ಸಾಮಾನ್ಯರಂತೆ ನಿಂತ ಕಿಂಗ್ ಕೊಹ್ಲಿ, ವಿಡಿಯೋ ನೋಡಿ

Popular Posts

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

You Might Also Like

ಪ್ರಮುಖಆರೋಗ್ಯಟೇಸ್ಟ್

Health- Papaya ಪಪ್ಪಾಯಿ ಹಣ್ಣಲ್ಲಿದೆ ಅದ್ಭುತ ಆರೋಗ್ಯ ಪ್ರಯೋಜನ

1 Min Read
ಪ್ರಮುಖಟೇಸ್ಟ್ಲೈಫ್‌ಸ್ಟೈಲ್

Breakfast Recipe ಬೆಳಗ್ಗಿನ ತಿಂಡಿಗೆ ಬಿಸಿ ಬಿಸಿ ಹಲಸಿನ ದೋಸೆ! ಸಿಂಪಲ್ ರೆಸಿಪಿ ಇಲ್ಲಿದೆ

1 Min Read
ಕರ್ನಾಟಕಟೇಸ್ಟ್ದೇಶಪ್ರಮುಖವಿದೇಶವೈರಲ್

Masala dose in sixth place ಜಾಗತಿಕ ಮಟ್ಟದಲ್ಲಿ ಈಗ ಮಸಾಲ ದೋಸೆ ಭಾರೀ ರುಚಿ!

2 Min Read
ಕರ್ನಾಟಕಆರೋಗ್ಯಜ್ಯೋತಿಷ್ಯಟೇಸ್ಟ್ಪ್ರಮುಖಲೈಫ್‌ಸ್ಟೈಲ್

Vaastu info ಚಪ್ಪಲಿ ಹಾಕಿ ಅಡುಗೆಮನೆಗೆ ಹೋಗಬಾರದಾ? ಹೋದ್ರೆ ಏನಾಗುತ್ತೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?