newsics.com
ಏ ಮಾಯ ಚೇಸಾವೆ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಸಮಂತಾ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಆದ್ರು. ಸ್ಟಾರ್ ಹೀರೋಗಳ ಜೊತೆ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಸಮಂತಾ ಟಾಪ್ ನಟಿಯಾಗಿದ್ದಾಗಲೇ ನಟ ನಾಗ ಚೈತನ್ಯ ಅವರನ್ನು ವಿವಾಹವಾದರು. ಬಹಳ ದಿನಗಳಿಂದ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಇಬ್ಬರ ಸಂಬಂಧ ಬಹಳ ದಿನಗಳ ಕಾಲ ಉಳಿಯಲಿಲ್ಲ.
ವಿಚ್ಛೇದನದ ಬಳಿ ನಟಿ ಸಮಂತಾಗೆ ಆರೋಗ್ಯ ಕೂಡ ಕೈ ಕೊಟ್ಟಿತ್ತು. ಸಮಂತಾ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ರು. ಸದ್ಯ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಲು ಒಂದು ವರ್ಷ ಸಿನಿಮಾದಿಂದ ದೂರ ಸರಿದಿದ್ರು. ಇದೀಗ ಮಾಜಿ ಪತಿ ನಾಗ ಚೈತನ್ಯ, ಶೋಭಿತಾ ಧೂಳಿಪಾಲ ಜೊತೆ ಎಂಗೇಜ್ ಆಗಿದ್ದು, ನಟಿ ಮೊದಲ ಫೋಟೋ ಹಂಚಿಕೊಂಡಿದ್ದಾರೆ.
ಮಾಜಿ ಪತಿ ನಾಗ ಚೈತನ್ಯ ಸೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಒಂದು ವಾರದ ನಂತರ ಸಮಂತಾ ರುತ್ ಪ್ರಭು ಸೀಕ್ರೆಟ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನಟಿ Instagramನಲ್ಲಿ ಬ್ರೌನ್ ಕಲರ್ ಸ್ವೆಟ್‌ಶರ್ಟ್ ಧರಿಸಿರುವ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಶಾಂತಿ ತುಂಬಿದ ಮ್ಯೂಸಿಯಂ ಹಾಗೂ ಶಾಂತಿ ಎಂಬ ಪದಗಳನ್ನು ಒಳಗೊಂಡಿತ್ತು. ನಟಿ ಕ್ಯಾಮೆರಾಗಾಗಿ ಸ್ಮೈಲ್ ನೀಡಿದ್ದು, ಜೋಡಿ ಸನ್‌ಗ್ಲಾಸ್‌ಗಳನ್ನು ಧರಿಸಿದ್ದರು. ಲೆಬ್ಲಾಂಕ್ ಅವರ “ನೌ ವಿ ಆರ್ ಫ್ರೀ” ಹಾಡಿನೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.