newsics.com
ಜಾನ್ವಿ ಕಪೂರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್. ಲೇಡಿ ಸೂಪರ್ಸ್ಟಾರ್ ಎಂದು ಕರೆಸಿಕೊಂಡ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಅವರು ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಾ ಬಾಲಿವುಡ್ನಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅವರು ಇತ್ತೀಚೆಗಷ್ಟೇ ಕೆಲವು ಫೋಟೋಸ್ ಶೇರ್ ಮಾಡಿದ್ದಾರೆ.
ನಟಿ ಜಾನ್ವಿ ಕಪೂರ್ ಅವರು ಆಕರ್ಷಕವಾದ ಕೆಂಪು ಬಣ್ಣದ ಸೀರೆ ಉಟ್ಟುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಅವರ ಸಂಪೂರ್ಣ ಲುಕ್ ರೆಟ್ರೋ ಸ್ಟೈಲ್ನಲ್ಲಿದೆ. ನಟಿ ಸುಂದರವಾದ ಕಸೂತಿ ಇರುವಂತಹ ಫುಲ್ ಸ್ಲೀವ್ಸ್ ಗ್ರೀನ್ ಬ್ಲೌಸ್ ಧರಿಸಿದ್ದರು. ಸೀರೆಯೂ ಆಕರ್ಷಕವಾಗಿತ್ತು. ನಟಿ ಜಾನ್ವಿ ಕಪೂರ್ ಈ ಸೀರೆಯಲ್ಲಿ ಅಮ್ಮನ ಪಡಿಯಚ್ಚಿನಂತೆ ಕಾಣಿಸಿದ್ದಾರೆ. ಅವರ ಫೋಟೋ ನೋಡಿದ ನೆಟ್ಟಿಗರು ಸೀರೆಯಲ್ಲಿ ಮಿಂಚುವ ಶ್ರೀದೇವಿ ಲಿಗಸಿಯನ್ನು ಅವರ ಮಗಳು ಜಾನ್ವಿ ಕಪೂರ್ ಮುಂದುವರಿಸುತ್ತಿದ್ದಾರೆ ಎಂದು ಬಾಯ್ತುಂಬ ಹೊಗಳಿದ್ದಾರೆ. ಅವರ ಫೊಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.