newsics.com
ಇಸ್ರೇಲ್: ಹಮಾಸ್ ದಾಳಿಯಿಂದ ಮೃತಪಟ್ಟಿರುವ ಪುತ್ರರ ವೀರ್ಯವನ್ನು ಇಸ್ರೇಲ್ ಪೋಷಕರು ಸಂಗ್ರಹಿಸಿ ಇಡುತ್ತಿದ್ದಾರೆ.
ಈಗಾಗಲೇ 170ಕ್ಕೂ ಹೆಚ್ಚು ಸೈನಿಕರ ಮತ್ತು ನಾಗರಿಕರ ದೇಹದಿಂದ ವೀರ್ಯವನ್ನು ಸಂಗ್ರಹಿಸಿ ಇಡಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಸಂಗ್ರಹಿಸಿದ ವೀರ್ಯಕ್ಕಿಂತ ಇದು 15 ಪಟ್ಟು ಹೆಚ್ಚಾಗಿದೆ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ಹೇಳಿದೆ.
ಅಕ್ಟೋಬರ್ 7ರ ಹಮಾಸ್ ದಾಳಿಯ ಬಳಿಕ ಇಸ್ರೇಲ್ನಲ್ಲಿ ಕೆಲವು ನಿಯಮಗಳನ್ನು ಸಡಿಲಿಸಲಾಗಿದೆ. ಇದೀಗ ಸೇನಾ ಅಧಿಕಾರಿಗಳೇ ಮೃತಪಟ್ಟ ಸೈನಿಕರ ವೀರ್ಯವನ್ನು ಸಂಗ್ರಹಿಸಿ ಇಡಬೇಕೆ ಎಂದು ಪೋಷಕರನ್ನು ಸಂಪರ್ಕಿಸಿ ಕೇಳುತ್ತಿದ್ದಾರೆ