newsics.com
ಉತ್ತರ ಪ್ರದೇಶ: ಮಾಂಸದೂಟ ತಯಾರಿಸುವಂತೆ ಪದೇಪದೆ ಬೇಡಿಕೆ ಇಡುತ್ತಿದ್ದ ಪತಿಯ ಮೇಲೆ ಸಿಟ್ಟುಗೊಂಡ ಮಹಿಳೆ ಆತನ ತಲೆಗೆ ಇಟ್ಟಿಗೆಯಿಂದ ಹೊಡೆದ ಮೆದುಳಿನ ಮಾಂಸವನ್ನೇ ಬಗೆದು ಹೊರತೆಗೆದಿರುವ ಘಟನೆ ಉತ್ತರ ಪ್ರದೇಶದ ಶಹಾಜಹಾನ್ಪುರದಲ್ಲಿ ನಡೆದಿದೆ.
ಪೊಲೀಸರು ಬಂದ ಮೇಲೆಯೂ ಮಹಿಳೆ ಗಂಡನಿಗೆ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಇದರ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಗಾಯತ್ರಿ ಸಸ್ಯಾಹಾರಿಯಾಗಿದ್ದು, ಸತ್ಯಪಾಲ್ ಮಾಂಸಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಿದ್ದ. ಈ ವಿಚಾರದಲ್ಲಿ ಆಗಾಗ್ಗೆ ಮನೆಯಲ್ಲಿ ಜಗಳವಾಗುತ್ತಿತ್ತು. ಕೆಲವೊಮ್ಮೆ ಸತ್ಯಪಾಲ್ ಗಾಯತ್ರಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ. ಗುರುವಾರವೂ ಸತ್ಯಪಾಲ್ ಮತ್ತೆ ಮಾಂಸಾಹಾರಕ್ಕೆ ಬೇಡಿಕೆ ಇಟ್ಟಿದ್ದ. ಗಾಯತ್ರಿ ನಿರಾಕರಿಸಿದಾಗ ಆತ ಕೋಪಗೊಂಡಿದ್ದು, ಅವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಈ ಜಗಳದ ನಡುವೆ ಗಾಯತ್ರಿ ಇಟ್ಟಿಗೆ ಎತ್ತಿಕೊಂಡು ಗಂಡನ ಮೇಲೆ ಹಲ್ಲೆ ನಡೆಸಿದ್ದಾಳೆ. ಸತ್ಯಪಾಲ್ ಹೊರಗೆ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ ಗಾಯತ್ರಿ ಅವನನ್ನು ಹಿಂಬಾಲಿಸಿ ನೆಲಕ್ಕೆ ಕೆಡವಿ ಅನಂತರ ಅವನ ಎದೆಯ ಮೇಲೆ ಕುಳಿತು ಪಟ್ಟುಬಿಡದೆ ಇಟ್ಟಿಗೆಯಿಂದ ಅವನ ತಲೆಗೆ ಹೊಡೆದನು. ಮೆದುಳು ಹೊರಗೆ ಬರುವವರೆಗೂ ರಕ್ತವು ಎಲ್ಲೆಡೆ ಹರಿಯುವವರೆಗೂ ಅವಳು ನಿಲ್ಲಿಸಲಿಲ್ಲ. ಈ ಭಯಾನಕ ಘಟನೆ ನೋಡಿದ ಸುತ್ತಮುತ್ತಲಿನವರು ಮಧ್ಯೆ ಹೋಗಲು ಭಯಪಟ್ಟರು.
ಗಾಯತ್ರಿ ಈ ಹಿಂದೆ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆದಿದ್ದಳು. ಆದರೆ ಬಳಿಕ ಚೇತರಿಸಿಕೊಂಡಿದ್ದಾಳೆ ಎಂದು ಸತ್ಯಪಾಲ್ ಅವರ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ