newsics.com
ಮುಂಬೈ: ಮಲಯಾಳಂ ಸ್ಟಾರ್ ನಟ ಉನ್ನಿ ಮುಕುಂದನ್ ನಟನೆಯ ಮಲ್ಲಿಕಾಪುರಂ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿ ದೇವಾನಂದ ಐಷಾರಾಮಿ ಕಾರಿನ ಒಡತಿಯಾಗಿದ್ದಾಳೆ.
ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಬ ನೂತನ ಕಾರು ಖರೀದಿಸಿದ ಖುಷಿಯಲ್ಲಿದ್ದಾರೆ. ವಿಶೇಷ ಎಂದರೆ ದೇವಾನಂದ ಅವರು ತಮ್ಮ ಹುಟ್ಟುಹಬ್ಬಕ್ಕೆ ಕಾರನ್ನು ಖರೀದಿಸಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ದೇವಾನಂದ ಖರೀದಿಸಿದ ಟೊಯೊಟಾ ಇನ್ನೋವಾ ಹೈಕ್ರಾಸ್ 30 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಇದನ್ನೂ ನೋಡಿದ ನೆಟ್ಟಿಗರು ಅಚ್ಚರಿ ಪಟ್ಟಿದ್ದರು, ಜೊತೆಗೆ ಇದಪ್ಪಾ ಸಾಧನೆ ಅಂದ್ರೆ, ಕ್ಯೂಟ್ ಪುಟ್ಟ ಅಂತೆಲ್ಲಾ ಕಾಮೆಂಟ್ಸ್ ಹಾಕಿ ಬಾಲನಟಿಯ ಸಾಧನೆಯ ಬಗ್ಗೆ ಹಾಡಿ ಹೊಗಳಿದ್ದರು.
ಸಾಕಷ್ಟು ಮಲಯಾಳಂ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿರೋ ಪುಟ್ಟ ಪ್ರತಿಭೆ ಚಿಕ್ಕ ವಯಸ್ಸಿನಲ್ಲೇ ಅನೇಕ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾಳೆ.