newsics.com
ಮುಂಬೈ: ಸೋನಾಕ್ಷಿ ಸಿನ್ಹಾ ಪತಿ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾದ ನಂತರ ಬೆಡ್ ರೂಮ್ನಲ್ಲಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ನ್ಯೂ ಕಪಲ್ ಹ್ಯಾಪಿ ವೀಡಿಯೊಗಳು ಮತ್ತು ಫೋಟೋಗಳು ಇದೀಗ ವೈರಲ್ ಆಗಿವೆ. ಹನಿಮೂನ್ ನಂತರ ಜಹೀರ್ ಇಕ್ಬಾಲ್ ಅವರು ತಮ್ಮ ಬೆಡ್ ರೂಮ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಸೋನಾಕ್ಷಿ ಸಿನ್ಹಾ ಅವರ ಹೊಸ ಮನೆ ಲುಕ್ ಕಾಣಿಸಿಕೊಂಡಿದೆ.
ಸೋನಾಕ್ಷಿ ಸಿನ್ಹಾ ತಮ್ಮ ಬೆಡ್ ರೂಮ್ ಅಲಂಕರಿಸುತ್ತಿದ್ದಾರೆ. ಗೋಡೆಗಳಿಗೆ ಚೆಂದದ ಫೋಟೋಗಳಲ್ಲಿ ಹಾಕಿದ್ದಾರೆ, ರೂಮ್ ಗೋಡೆಯ ಮೇಲೆ ವಾಲ್ ಪೇಪರ್ ಅಂಟಿಸುವ ಕೆಲಸದಲ್ಲಿ ನಟಿ ಬ್ಯುಸಿ ಆಗಿದ್ದಾರೆ. ಜಹೀರ್ ಇಕ್ಬಾಲ್ ಈ ಪೋಸ್ಟ್ ಹಂಚಿಕೊಂಡಿದ್ದು, ‘ಅವಳು ತನ್ನ ಮನೆಯನ್ನು ಅಲಂಕರಿಸುತ್ತಿದ್ದಾಳೆ ’ ಎಂದು ವಿಡಿಯೋಗೆ ಟೈಟಲ್ ನೀಡಿದ್ದಾರೆ.
ನಟಿ ಒಳ್ಳೆಯ ಕ್ಷಣಗಳನ್ನು ಫೋಟೋಗಳ ಮೂಲಕ ಕ್ಯಾಪ್ಚರ್ ಮಾಡಲು ಇಷ್ಟಪಡುತ್ತಾರೆ. ಜಹೀರ್ ಅವರ ಪೋಸ್ಟ್ ಗೆ ಅಭಿಮಾನಿಗಳು ಲೈಕ್ಗಳ ಸುರಿಮಳೆ ಗೈದಿದ್ದಾರೆ.