newsics.com
ಶಿರಾಡಿ ಘಾಟ್ ಬಳಿಯ ಎಡಕುಮೇರಿ – ಕಡವಗರಳ್ಳಿ ಮಧ್ಯೆ ಮತ್ತೆ ಭೂಕುಸಿತವಾಗಿದ್ದು, ಬೆಂಗಳೂರು – ಮಂಗಳೂರು ರೈಲು ಒಂದು ವಾರಗಳ ಸಂಚಾರ ಬಂದ್ ಆಗಿದೆ. 14 ರೈಲುಗಳು ಸಂಚಾರ ರದ್ದುಗೊಂಡಿದ್ದು, 700 ಮಂದಿಯಿಂದ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಆಗಸ್ಟ್ 4ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಮಂಗಳೂರು – ಬೆಂಗಳೂರು ನಡುವಿನ ಸುಬ್ರಹ್ಮಣ್ಯ ರೈಲು ನಿಲ್ದಾಣ ಸಮೀಪದ ಎಡಕುಮೇರಿಯ ದೋಣಿಗಲ್ ಸಮೀಪ ಭೂಕುಸಿತವಾಗಿದ್ದು, ಆಗಸ್ಟ್ 4ರ ವರೆಗೆ ಒಟ್ಟು 14 ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೇರಳ, ಮುರುಡೇಶ್ವರ, ಮಂಗಳೂರು ಭಾಗಕ್ಕೆ ಸೇವೆ ಒದಗಿಸುವ ರೈಲು ಸಂಚಾರದಲ್ಲಿ ಅಡಚಣೆ ಉಂಟಾಗಲಿದೆ.
ರೈಲು ಸಂಚಾರ ರದ್ದಾದ ಬೆನ್ನಲ್ಲೇ ಬೆಂಗಳೂರು – ಮಂಗಳೂರು ನಡುವಿನ ವಿಮಾನ ದರ ಏರಿಕೆಯಾಗಿದೆ. ಈ ಮಾರ್ಗದಲ್ಲಿ ಸಾಮಾನ್ಯವಾಗಿ ಇರುತ್ತಿದ್ದ 2 ರಿಂದ 3 ಸಾವಿರ ದರ ಇದೀಗ ಏಕಾಏಕಿ ಹತ್ತು ಸಾವಿರಕ್ಕೆ ಏರಿಕೆಯಾಗಿದೆ