Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಎರಡು-ಮೂರು ವರ್ಷದ ಪುಟ್ಟ ಶಾಲಾ ಮಕ್ಕಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರಂಭಿಕ ಶಿಕ್ಷಣದ ಹೆಸರಿನಲ್ಲಿ ಎಳೆಯ ಮಕ್ಕಳ ಮೇಲೆ ಹೇರಲಾಗುತ್ತಿರುವ ಒತ್ತಡದ ಬಗ್ಗೆ ತೀವ್ರ ಚರ್ಚೆಗೆ ನಾಂದಿ ಹಾಡಿದೆ.
ತಮ್ಮ ತರಗತಿಯ ಕಿಟಕಿಯ ಹಿಂದೆ ನಿಂತಿರುವ ಇಬ್ಬರು ಮಕ್ಕಳು ಕಬ್ಬಿಣದ ಸರಳುಗಳನ್ನು ಹಿಡಿದು ಕಣ್ಣೀರು ಹಾಕುತ್ತಿರುವುದು ವಿಡಿಯೋದಲ್ಲಿದೆ.
ನನ್ನ ಅಮ್ಮನಿಗೆ ಫೋನ್ ಮಾಡಿ… ನನ್ನ ಅಮ್ಮನ ಹೆಸರು ಅಮ್ಮ” ಎಂದು ಒಬ್ಬ ಮಗು ಹೇಳಿದರೆ, ಇನ್ನೊಂದು ಮಗು ಹೊರಗೆ ನೋಡುತ್ತಾ ಮೌನವಾಗಿ ಅಳುತ್ತಾನೆ.
ಈ ವಿಡಿಯೋದಲ್ಲಿ, ಇಬ್ಬರು ಮಕ್ಕಳು ತಮ್ಮ ಟೀಚರ್ ಬಳಿ “ನಮಗೆ ಹಾಲು ಕುಡಿಯಲು ಮನೆಗೆ ಕಳುಹಿಸಿ” ಎಂದು ಮುಗ್ಧವಾಗಿ ಮನವಿ ಮಾಡುತ್ತವೆ. ಅವರ ಧ್ವನಿಯಲ್ಲಿನ ಮುಗ್ದತೆ ಮತ್ತು ಅಸಹಾಯಕತೆಯನ್ನು ಕಾಣಬಹುದು.
ಈ ವಿಡಿಯೋದಿಂದಾಗಿ, ಎರಡು-ಮೂರು ವರ್ಷದ ಮಕ್ಕಳನ್ನು ಶಾಲೆಗೆ(LKG) ಕಳುಹಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗಿದೆ. ಬಾಲ್ಯದ ಅಮೂಲ್ಯ ಕ್ಷಣಗಳು ಮತ್ತು ತಾಯಿಯ ವಾತ್ಸಲ್ಯ, ಭದ್ರತೆಯ ಮಹತ್ವವನ್ನು ಇದು ಮತ್ತೊಮ್ಮೆ ನೆನಪಿಸಿದೆ.