newsics.com
ಇಟವಾ(ಉತ್ತರ ಪ್ರದೇಶ): ನವವಿವಾಹಿತನೊಬ್ಬ ತನ್ನ ಮೊದಲ ರಾತ್ರಿಯ ದಿನದಂದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪತ್ನಿ ಗಂಡನ ಮನೆಗೆ ಬಂದ ಕೆಲವೇ ಸಮಯದಲ್ಲಿ ಪತಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊಸ ಬದುಕಿನ ಆಸೆಯಲ್ಲಿ ಗಂಡನ ಮನೆಗೆ ಬಂದಿದ್ದ ಪತ್ನಿ, ಕೋಣೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾಳೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇಟವಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಉಶ್ರಾಹರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿವೃತ್ತ ಸೈನಿಕ ಗ್ಯಾನ್ ಸಿಂಗ್ ಅವರ ಕಿರಿಯ ಪುತ್ರ ಸತ್ಯೇಂದ್ರ ಅವರ ಮದುವೆಗೆ ಮುನ್ನ ಅಂದರೆ ಜುಲೈ2ರಂದು ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನೆರವೇರಿತ್ತು. ರಾತ್ರಿಯಿಡೀ ಬ್ಯಾಂಡ್ ಬಾಜಾ ನಡೆದಿತ್ತು. ಬಳಿಕ ವಿಧಿವಿಧಾನ ಪ್ರಕಾರ ಸತ್ಯೇಂದ್ರ ಅವರ ವಿವಾಹ ನೆರವೇರಿತ್ತು. ಜುಲೈ 3ರಂದು ವಧು ತನ್ನ ತವರು ಮನೆಗೆ ವಿದಾಯ ಹೇಳಿ ಮೆರವಣಿಗೆಯಲ್ಲಿ ಗಂಡನ ಮನೆಗೆ ಬಂದಿದ್ದಳು.
ಬುಧವಾರ ಸಂಜೆ ವರನ ಮನೆಯಲ್ಲಿ ಅದ್ದೂರಿಯಾಗಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವರನೊಂದಿಗೆ ವರನ ಸ್ನೇಹಿತರು ಕೂಡ ಮದುವೆಯನ್ನು ಸಂಭ್ರಮಿಸಿದ್ದರು. ಕಾರ್ಯಕ್ರಮದ ಬಳಿಕ ಡಿಜೆಗೆ ಸ್ವತಃ ವರ ಸತ್ಯೇಂದ್ರ ಹಣವನ್ನೂ ನೀಡಿದ್ದಾರೆ. ಆದರೆ, ಈ ಸಂಭ್ರಮ ಹೆಚ್ಚಿನ ಕಾಲ ಇದ್ದಿರಲಿಲ್ಲ. ಇನ್ನೇನು ಮೊದಲ ರಾತ್ರಿಗೆ ಸಜ್ಜಾಗಬೇಕು ಎನ್ನುವ ಸಮಯದಲ್ಲಿ 2ನೇ ಮಹಡಿಯಲ್ಲಿ ತನ್ನ ಕೋಣೆಯಲ್ಲಿ ಸತ್ಯೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಲು ತೆಗೆದುಕೊಂಡು ವಧು ಕೋಣೆಗೆ ಬಂದಾಗ ಎಷ್ಟೇ ಬಡಿದರೂ ಬಾಗಿಲು ತೆಗೆದಿರಲಿಲ್ಲ. ಅನುಮಾನ ಬಂದು ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ತಕ್ಷಣವೇ ಬಾಗಿಲನ್ನು ಒಡೆದು ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.
ಈವರೆಗೂ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕಾರಣ ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.
ನಾಳೆ (ಜು.5) ಧ್ರುವ ಯೋಗ, ಸರ್ವಾರ್ಥ ಸಿದ್ಧಿಯೋಗ; ಈ ಐದು ರಾಶಿಯವರಿಗೆ ಅದೃಷ್ಟದ ದಿನ
ದರ್ಶನ್, ಪವಿತ್ರಾ ಗೌಡ ಟೀಮ್ ನ್ಯಾಯಾಂಗ ಬಂಧನ ಜುಲೈ 18ರವರೆಗೆ ವಿಸ್ತರಣೆ