Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹಿಜಾಬ್ ಆಯ್ತು, ಈ ಕಾಲೇಜುಗಳಲ್ಲೀಗ ಜೀನ್ಸ್, ಟೀ ಶರ್ಟ್ ಕೂಡ ನಿಷೇಧ!
ದೇಶ

ಹಿಜಾಬ್ ಆಯ್ತು, ಈ ಕಾಲೇಜುಗಳಲ್ಲೀಗ ಜೀನ್ಸ್, ಟೀ ಶರ್ಟ್ ಕೂಡ ನಿಷೇಧ!

Share
2 Min Read
SHARE

newsics.com

ಮುಂಬೈ: ಈ ಮೊದಲು ಹಿಜಾಬ್ ನಿಷೇಧಿಸಿ ಸುದ್ದಿಯಾಗಿದ್ದ ಮುಂಬೈನ ಚೆಂಬೂರಿನ ಆಚಾರ್ಯ ಮತ್ತು ಮರಾಠೆ ಕಾಲೇಜು ಈಗ ಟಿ-ಶರ್ಟ್ ಹಾಗೂ ಜೀನ್ಸ್ ತೊಡುವುದನ್ನು ನಿಷೇಧಿಸಿ ಮತ್ತೊಮ್ಮೆ ಸುದ್ದಿಯಲ್ಲಿದೆ.

ಕಳೆದ ವರ್ಷ ವಸ್ತ್ರಸಂಹಿತೆ ಜಾರಿಗೊಳಿಸಿದ್ದ ಈ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಮತ್ತಿತರ ಧಾರ್ಮಿಕ ಗುರುತುಗಳ ವಸ್ತ್ರ ತೊಟ್ಟು ಕಾಲೇಜಿಗೆ ಪ್ರವೇಶಿಸಬಾರದು ಎಂದು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿತ್ತು.

ಈಗ ಈ ಕಾಲೇಜಿನಲ್ಲಿ ಜೀನ್ಸ್ ಮತ್ತು ಟೀ ಶರ್ಟ್‌ ಧರಿಸುವುದನ್ನೂ ನಿಷೇಧಿಸಲಾಗಿದೆ. ಸೋಮವಾರ ಚೆಂಬೂರಿನ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಗೇಟ್‌ನಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿದ್ದ ವಿದ್ಯಾರ್ಥಿಗಳನ್ನು ತಡೆದಿದ್ದರು.

ಕಾಲೇಜು ಹೊಸ ವಸ್ತ್ರಸಂಹಿತೆಯನ್ನು ಬಿಡುಗಡೆ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಕಾಲೇಜಿನಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು.
ಜೂನ್ 27 ರಂದು ಆಚಾರ್ಯ ಮತ್ತು ಮರಾಠೆ ಕಾಲೇಜು ಹೊರಡಿಸಿದ ನೋಟಿಸ್ ಪ್ರಕಾರ, ಹರಿದ ಜೀನ್ಸ್, ಟಿ-ಶರ್ಟ್, ತೆರೆದ ಬಟ್ಟೆ ಮತ್ತು ಜೆರ್ಸಿಗಳಿಗೆ ಅನುಮತಿ ಇಲ್ಲ ಎಂದು ಹೇಳಿದೆ. ಕಾಲೇಜು ಪ್ರಾಂಶುಪಾಲರಾದ ಡಾ.ವಿದ್ಯಾಗೌರಿ ಲೇಲೆ ಅವರು ಈ ಸಂಬಂಧ ನೋಟಿಸ್ ಜಾರಿ ಮಾಡಿದ್ದಾರೆ.

ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಔಪಚಾರಿಕ ಮತ್ತು ಯೋಗ್ಯವಾದ ಉಡುಪನ್ನು ಧರಿಸಬೇಕು. ಗಂಡುಮಕ್ಕಳು ಅರ್ಧ-ಶರ್ಟ್ ಅಥವಾ ಪೂರ್ಣ-ಶರ್ಟ್ ಮತ್ತು ಪ್ಯಾಂಟ್ ಧರಿಸಬಹುದು. ಹುಡುಗಿಯರು ಭಾರತೀಯ ಅಥವಾ ಪಾಶ್ಚಿಮಾತ್ಯ ಉಡುಗೆಯನ್ನು ಧರಿಸಬಹುದು. ವಿದ್ಯಾರ್ಥಿಗಳು ಧರ್ಮ ಅಥವಾ ಸಾಂಸ್ಕೃತಿಕ ಅಸಮಾನತೆಯನ್ನು ಪ್ರತಿಬಿಂಬಿಸುವ ಯಾವುದೇ ಉಡುಪನ್ನು ಧರಿಸಬಾರದು.
ನಿಖಾಬ್, ಹಿಜಾಬ್, ಬುರ್ಖಾ, ಸ್ಟೋಲ್, ಕ್ಯಾಪ್, ಬ್ಯಾಡ್ಜ್ ಇತ್ಯಾದಿಗಳನ್ನು ಕೊಠಡಿಯಲ್ಲಿಯೇ ಇರಿಸಿಕೊಳ್ಳಬೇಕು. ಆಗ ಅವರು ಇಡೀ ಕಾಲೇಜು ಆವರಣದಲ್ಲಿ ಓಡಾಡಬಹುದಾಗಿದೆ. ಕಳೆದ ವರ್ಷ ಹಿಜಾಬ್ಗೆ ನಿಷೇಧ ಹೇರಲಾಗಿತ್ತು, ಇದೀಗ ಟಿ-ಶರ್ಟ್ ಹಾಗೂ ಜೀನ್ಸ್ಗೆ ನಿಷೇಧ ಹೇರಲಾಗಿದೆ.

ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿರುವಾಗ ಔಪಚಾರಿಕ ಮತ್ತು ಯೋಗ್ಯವಾದ ಉಡುಗೆಯನ್ನು ಧರಿಸಬೇಕು. ಕಾಲೇಜಿನ ಪ್ರಕಾರ, ಕಾರ್ಪೊರೇಟ್ ಜಗತ್ತಿಗೆ ಸಿದ್ಧವಾಗಲು ಆಡಳಿತವು ಅವರನ್ನು ಸಿದ್ಧಪಡಿಸುತ್ತಿದೆ. ದಾಖಲಾತಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಡ್ರೆಸ್ಕೋಡ್ ಬಗ್ಗೆ ತಿಳಿಸಲಾಗಿತ್ತು. ಈ ಹಿಂದೆ ಹಿಜಾಬ್ ನಿಷೇಧದ ವಿರುದ್ಧ 9 ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮದುವೆ ಮನೆಯಲ್ಲಿ ಮಂಗನ ಕಾಟ: ಎಂಟು‌ ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

ಗಂಡನಿಗೆ ಒದ್ದು ಕಬರ್ಡ್‌ನಲ್ಲಿ ಕೂಡಿ ಹಾಕಿದ ಸೋನಾಕ್ಷಿ ಸಿನ್ಹಾ!

ಅನಿಮಲ್‌ ಬಳಿಕ ಬಾಲಿವುಡ್ನಲ್ಲಿ ನಟಿ ತೃಪ್ತಿ ದಿಮ್ರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌!

TAGGED:eans and t-shirt also banned these colleges mumbai newsics
Share This Article
Facebook Twitter Copy Link Print
Previous Article ಯೂಟ್ಯೂಬರ್ ಖಲೀದ್ ಜತೆ ಗಂಗೆ ಬಾರೆ ತುಂಗೆ ಬಾರೆ ನಟಿ ಸುನೈನಾ ನಿಶ್ಚಿತಾರ್ಥ?
Next Article ಮಗನಿಗೆ ಖೈದಿ ರೀತಿ ಡ್ರೆಸ್ ಹಾಕಿ ಫೋಟೋಶೂಟ್ ಮಾಡಿದ ದರ್ಶನ್ ಅಭಿಮಾನಿ

Popular Posts

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

You Might Also Like

ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

ದಳಪತಿ ವಿಜಯ್ ಕೊಲ್ಲೂರು ಲಕ್ಸುರಿ ಸವಾರಿ! ಕೋಟಿ ಕೋಟಿ ಬೆಲೆಯ ಈ ಕಾರಿನ ರಹಸ್ಯವೇನು?

2 Min Read
ಕರ್ನಾಟಕದೇಶಪ್ರಮುಖ

IRCTC New Website ಜುಲೈ 15ಕ್ಕೆ IRCTC ಹೊಸ ವೆಬ್‌ಸೈಟ್ ಲಾಂಚ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?