newsics.com
ಕಲಬುರಗಿ : ಮಳೆ ಸುರಿಯುತ್ತಿದ್ದ ಕಾರಣಕ್ಕೆ ಮರದಡಿ ಆಸರೆ ಪಡೆಯಲು ಹೋದ ಮಹಿಳೆಯ ಕಿವಿಗೆ ಹಾವು ಕುಟುಕಿದೆ. ವಿಷವೇರಿ ಮಹಿಳೆ ಸತ್ತು ಹೋಗಿದ್ದಾರೆ. ಕಲಬುರಗಿಯ ಸೂಗೂರು(N) ಗ್ರಾಮದ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ.
ವಿಜಯಲಕ್ಷ್ಮಿ ಮೃತ ಮಹಿಳೆ. ಚಿತ್ತಾಪುರ ತಾಲೂಕಿನ ಸೂಗೂರುಗ್ರಾಮದ ನಿವಾಸಿಯಾಗಿದ್ದಾರೆ. ಕೂಲಿ ಕೆಲಸಕ್ಕಾಗಿ ಜಮೀನಿಗೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ದಿಢೀರ್ ಮಳೆ ಶುರುವಾಗಿತ್ತು. ಹೀಗಾಗಿ ಮಳೆ ನಿಂತ ಮೇಲೆ ಮನೆಗೆ ಹೋಗೋಣಾವೆಂದು ಮರದಡಿ ನಿಂತು ಆಸರೆ ಪಡೆದಿದ್ದರು.
ಈ ವೇಳೆ ಮಹಿಳೆಯ ಕಿವಿಗೆ ಹಾವು ಕಚ್ಚಿದ್ದು, ಅಸ್ವಸ್ಥಗೊಂಡ ವಿಜಯಲಕ್ಷ್ಮಿ ಕುಸಿದು ಬಿದ್ದಿದ್ದಾರೆ. ಅಲ್ಲಿದ್ದವರು ವಿಜಯಲಕ್ಷ್ಮಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆದಾಗಲೇ ಹಾವಿನ ವಿಷವೇರಿದ್ದರಿಂದ ಆಕೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.