ಯಾದಗಿರಿ : ಕುಡಿದ ಅಮಲಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಯನ್ನು ಐವರ ಗ್ಯಾಂಗ್ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಶಹಾಪುರದಲ್ಲಿ ಕೃತ್ಯ ನಡೆದಿದೆ.
ಬಾರ್ & ರೆಸ್ಟೋರೆಂಟ್ ಸಿಸಿಕ್ಯಾಮರಾ ದೃಶ್ಯ ಪರಿಶೀಲಿಸಿದ್ದ ಪೊಲೀಸರು ಈ ವೇಳೆ ಹಲ್ಲೆ ನಡೆಸಿ ಕೊಂದಿರುವುದು ದೃಢಪಟ್ಟಿದೆ. ಹೀಗಾಗಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದಿದ್ದಾರೆ. ಜೂನ್ 5ರಂದು ಮೋಟಗಿ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ಕೃತ್ಯ ನಡೆದಿದೆ
ಮಹೇಶ್ ಕನಕಟ್ಟಿ ಕೊಲೆಯಾದ ಅರಣ್ಯಾಧಿಕಾರಿ. ಐವರ ಗ್ಯಾಂಗ್ ಬಾರ್ & ರೆಸ್ಟೋರೆಂಟ್ನಲ್ಲಿ ಕುಡಿದು ಕೂಗಾಡಿದ್ದಾರೆ. ಇದಕ್ಕೆ ಪ್ರಶ್ನಿಸಿದಕ್ಕೆ ಮಹೇಶ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಬಡಿಗೆಯಿಂದ ಬಡಿದು, ಕಾಲಿನಿಂದ ಒದ್ದು ಕೊಲೆ ಮಾಡಿದ್ದಾರೆ.
ಮೋಟಗಿ ರೆಸ್ಟೋರೆಂಟ್ ಹೊರಗೆ ಬಿದ್ದಿದ್ದ ಅರಣ್ಯಾಧಿಕಾರಿ ಮಹೇಶ್ ಶವವನ್ನು ಸಹಜ ಸಾವು ಎಂದು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ಸಹಜ ಸಾವಲ್ಲ ಕೊಲೆ ಎಂದು ಪತ್ನಿ ನಾಗವೇಣಿ ಅನುಮಾನ ವ್ಯಕ್ತಪಡಿಸಿದ್ದಾರೆ.