ಬೆಂಗಳೂರು: ಸೋಪ್ ಮೇಲೆ ಕಾಲಿಟ್ಟು ಮಹಿಳೆಯೊಬ್ಬರು ಕಟ್ಟಡದ ಮೇಲಿಂದ ಬಿದ್ದ ಘಟನೆ ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಕನಕನಗರದಲ್ಲಿ ನಡೆದಿದೆ.
ರುಬಾಯ್(27) ಕಟ್ಟಡದಿಂದ ಬಿದ್ದಿರುವ ಮಹಿಳೆ. ಕಟ್ಟಡದ ಮೇಲೆ ಪತಿಯೊಂದಿಗೆ ನಿಂತಿದ್ದ ಪತ್ನಿ ರುಬಾಯ್, ಈ ವೇಳೆ ಆಕಸ್ಮಿಕವಾಗಿ ಸೋಪು ಮೇಲೆ ಕಾಲಿಟ್ಟು ಜಾರಿದ್ದಾರೆ. ಕೂಡಲೇ ಪಕ್ಕದಲ್ಲೇ ನಿಂತಿದ್ದ ಪತಿ, ಪತ್ನಿಯ ಕೈಯನ್ನು ಹಿಡಿದುಕೊಂಡಿದ್ದು, ಆ ಬಳಿಕ ಕೈ ಜಾರಿ ಕೆಳಬಿದ್ದಿದ್ದಾರೆ.
ತಕ್ಷಣ ಸ್ಥಳೀಯರು ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಐಸಿಯು ವಾರ್ಡ್ ನಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೇಲಿಂದ ಬಿದ್ದ ರಭಸಕ್ಕೆ ಮಹಿಳೆ ಕೋಮಾಕ್ಕೆ ಹೋಗಿದ್ದಾರೆ. ಕಟ್ಟಡದ ಮೇಲಿಂದ ಬಿದ್ದ ಮಹಿಳೆಯ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.