Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ವಿಜಯ್ ನೇತೃತ್ವದ ಟಿವಿಕೆ ಸ್ಪರ್ಧೆ?
ಪ್ರಮುಖಮನರಂಜನೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ವಿಜಯ್ ನೇತೃತ್ವದ ಟಿವಿಕೆ ಸ್ಪರ್ಧೆ?

Share
2 Min Read
SHARE

newsics.com/ನ್ಯೂಸಿಕ್ಸ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಕೂಡ ಟಿವಿಕೆ ಪಕ್ಷದಿಂದ ಸ್ಪರ್ಧಿಗಳು ಕಣಕ್ಕೆ ಇಳಿಯುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ

ಜಿಬಿಎ ಚುನಾವಣೆ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ 5 ನಗರ ಪಾಲಿಕೆಗಳಿಗೆ 2026ರ ಆಗಸ್ಟ್ 31ರೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ತಮಿಳು ಮತದಾರರು ಇರುವ ವಾರ್ಡ್‌ಗಳಲ್ಲಿ ಟಿವಿಕೆ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ ಎನ್ನಲಾಗ್ತಿದೆ. ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಗೆದ್ದ ಕ್ರೇಜ್ ಬಳಸಿಕೊಂಡು ಇಲ್ಲಿ ಸ್ಪರ್ಧಿಗಳು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ.

ತಮಿಳು ನಟನ ಪಕ್ಷ ಕರ್ನಾಟಕದಲ್ಲಿ ನೆಲೆ ಕಂಡುಕೊಂಡರೆ ಹೇಗೆ ಎನ್ನುವ ಚರ್ಚೆ ಆರಂಭವಾಗಿದೆ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಬೆಂಗಳೂರಿನ ಕೆಲ ವಾರ್ಡ್‌ಗಳಲ್ಲಿ ತಮಿಳು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಂತಹ ಕಡೆ ಟಿವಿಕೆ ಪಕ್ಷದಿಂದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದರೆ ಮುಂದೆ ಫಲಿತಾಂಶ ಏನಾಗಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಾಬಲ್ಯವೇ ಜಾಸ್ತಿಯಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ನಿಧಾನವಾಗಿ ತನ್ನ ಖದರ್ ಕಳೆದುಕೊಳ್ಳುತ್ತಿದೆ. ಇನ್ನುಳಿದಂತೆ ಆಪ್ ಪಕ್ಷ, ಉತ್ತಮ ಪ್ರಜಾಕೀಯ ಪಕ್ಷಗಳ ಹೆಸರು ಕೆಲವರಿಗೆ ಗೊತ್ತು. ರಾಜ್ಯಕ್ಕೆ ಒಂದು ಸದೃಢ ಪ್ರಾದೇಶಿಕ ಪಕ್ಷ ಬೇಕು ಎನ್ನುವ ಕೂಗು ಎದ್ದಿದೆ. ಎರಡು ವರ್ಷದಲ್ಲಿ ವಿಜಯ್ ಸ್ವಂತ ಪಕ್ಷ ಸ್ಥಾಪಿಸಿ ಗೆದ್ದಿದ್ದಾರೆ ಅಂದಮೇಲೆ ಕರ್ನಾಟಕದಲ್ಲಿ ಅಂತಹ ಮ್ಯಾಜಿಕ್ ನಡೆಯುವುದಿಲ್ಲವೇ ಎನ್ನುವ ಚರ್ಚೆ ಶುರುವಾಗಿದೆ. ಕನ್ನಡದಲ್ಲಿ ಯಾವುದೇ ನಟ ಅಂತಹ ಸಾಹಸ ಮಾಡುವ ಲಕ್ಷಣಗಳು ಕಾಣುತ್ತಿಲ್ಲ.

ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯ ಎನ್ನುತ್ತಲೇ ಇದ್ದಾರೆ. ಸಕ್ರಿಯ ರಾಜಕೀಯಕ್ಕೆ ಇಳಿಯುತ್ತಿಲ್ಲ. ಉಪ್ಪಿ ಅಖಾಡಕ್ಕೆ ಇಳಿದರೆ ಏನಾದರೂ ಬದಲಾವಣೆ ಆಗಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಆದರೆ ಅವರು ಮನಸ್ಸು ಮಾಡುವಂತೆ ಕಾಣ್ತಿಲ್ಲ. ಇದೆಲ್ಲದರ ನಡುವೆ ತಮಿಳುನಾಡಿನ ಟಿವಿಕೆ ಪಕ್ಷ ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎನ್ನುವುದು ಅಚ್ಚರಿ ಮೂಡಿಸಿದೆ. ದೊಡ್ಡ ಮಟ್ಟದಲ್ಲಿ ಅಲ್ಲದೇ ಇದ್ದರೂ ಆರಂಭದಲ್ಲಿ ಸಣ್ಣದಾಗಿ ಪಕ್ಷವನ್ನು ಕಟ್ಟಿ ಬೆಳೆಸುವ ಪ್ರಯತ್ನ ನಡೆಯುವಂತೆ ಕಾಣುತ್ತಿದೆ. ಈಗಾಗಲೇ ಕೆಲವರು ಸಭೆ ನಡೆಸಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ.

ವಿಜಯ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಕೆಲ ಅಭಿಮಾನಿಗಳು ಹೋಗಿದ್ದರು. ಟಿವಿಕೆ ಮಾತ್ರವಲ್ಲ ಆಂಧ್ರದ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವನ್ನು ಕರ್ನಾಟಕಕ್ಕೆ ವಿಸ್ತರಿಸುವ ಕೆಲಸ ಆರಂಭವಾಗಿದೆ. ಚಿತ್ರದುರ್ಗದಲ್ಲಿ ಕಳೆದ ತಿಂಗಳು ಜನಸೇನಾ ಪಕ್ಷದ ಕಾರ್ಯಕ್ರಮ ನಡೆದಿದ್ದರು. ಸ್ವತಃ ಪವನ್ ಸಹೋದರ ನಾಗಬಾಬು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅವರ ನೇತೃತ್ವದಲ್ಲಿ ಕೆಲ ಜನಸೇನಾ ಪಕ್ಷ ಸೇರಿದ್ದರು. ಹೀಗೆ ಒಂದ್ಕಡೆ ತಮಿಳುನಾಡಿನ ಟಿವಿಕೆ ಹಾಗೂ ಮತ್ತೊಂದು ಕಡೆ ಆಂಧ್ರದ ಜನಸೇನಾ ಪಕ್ಷಗಳು ಕರ್ನಾಟಕದಲ್ಲಿ ಅಸ್ತಿತ್ವ ಸಾಧಿಸುವ ಪ್ರಯತ್ನ ಆರಂಭಿಸಿವೆ. ಇದು ಹೀಗೆ ಮುಂದುವರೆದರೆ ರಾಜ್ಯದಲ್ಲಿ ಕನ್ನಡಿಗರು ಇದ್ದು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಚರ್ಚೆ ಶುರುವಾಗಿದೆ.

https://x.com//status/2049374097835237819?ref_src=twsrc%5Etfw%7Ctwcamp%5Etweetembed%7Ctwterm%5E2049374097835237819%7Ctwgr%5Ee3365840ad536f549e112d6b76cdec951a77dbe9%7Ctwcon%5Es1_c10&ref_url=https%3A%2F%2Fapi-news.dailyhunt.in%2F

 

ಸಿಎಂ ವಿಜಯ್‌ಗೆ ಹೊಸ ಸಂಕಷ್ಟ; ಸುಪ್ರೀಂ ತಲುಪಿದ ವಿಚಾರ!

TAGGED:Will Vijay-led TVK contest the Greater Bengaluru Authority elections?
Share This Article
Facebook Twitter Copy Link Print
Previous Article ಸಿಎಂ ವಿಜಯ್‌ಗೆ ಹೊಸ ಸಂಕಷ್ಟ; ಸುಪ್ರೀಂ ತಲುಪಿದ ವಿಚಾರ!
Next Article ರಾಜ್ ಬಿ ಶೆಟ್ಟಿಯ ಮೊದಲ ಹಿಂದಿ ಸಿನಿಮಾದ ಟ್ರೈಲರ್ ರಿಲೀಸ್

Popular Posts

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

You Might Also Like

ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read
ದೇಶಪ್ರಮುಖ

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read
ಕರ್ನಾಟಕಪ್ರಮುಖ

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read
ದೇಶಪ್ರಮುಖ

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?