newsics.com
ಹೈದರಾಬಾದ್: ಸೋಶಿಯಲ್ ಮೀಡಿಯಾ ಪ್ರಭಾವಿಯೊಬ್ಬ ಕಂತೆ ಕಂತೆ ನೋಟುಗಳನ್ನು ರಸ್ತೆಗೆ ಎಸೆದಿರುವ ಘಟನೆ ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿ ನಡೆದಿದೆ.
ವಾಹನ ದಟ್ಟನೆಯಿರುವ ನಡು ರಸ್ತೆಯಲ್ಲೇ ನಿಂತು ಈ ಯುವಕ ನೋಟುಗಳನ್ನು ರಸ್ತೆಗೆ ಎಸೆದಿದ್ದು, ನೋಟುಗಳ ಸುರಿಮಳೆ ಸುರಿಯುತ್ತಿದ್ದಂತೆ ಸ್ಥಳೀಯರು ಶಾಕ್ ಆಗಿದ್ದಾರೆ. ಹಣದ ಸುರಿಮಳೆಯನ್ನು ಕಂಡು ಜನರು ಹಣ ಹೆಕ್ಕಲು ಮುಗಿಬಿದ್ದಿದ್ದಾರೆ.
@indian66669296 ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಎರಡೂ ಕೈಗಳಲ್ಲಿ ಕಂತೆ ಕಂತೆ ನೋಟುಗಳನ್ನು ಇಟ್ಟುಕೊಂಡು ರಸ್ತೆಯ ವಾಹನ ಸಂಚಾರದ ನಡುವೆಯೂ ಹಣ ಎಸೆಯುತ್ತಿರುವುದು ಸೆರೆಯಾಗಿದೆ.
Dear @RachakondaCop @TelanganaDGP can u Warn such Chapris who are creating Nuisance on Roads in Name of Content??? pic.twitter.com/pEX3BLCeiq
— Mahesh Goud #9999# (@indian66669296) August 21, 2024