newsics.com/ನ್ಯೂಸಿಕ್ಸ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಟಲಿಯ ರಾಜಧಾನಿ ರೋಮ್‌ಗೆ ಭೇಟಿ ನೀಡಿದ್ದು, ಮೋದಿಯವರಿಗೆ ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಆತ್ಮೀಯ ಸ್ವಾಗತ ಕೋರಿದ್ದಾರೆ.
ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ವಿಶೇಷ ಆಹ್ವಾನದ ಮೇರೆಗೆ ನಡೆದಿರುವ ಈ ಪ್ರವಾಸವು, ಪ್ರಧಾನಿ ಮೋದಿಯವರು ಇಟಲಿಗೆ ನೀಡುತ್ತಿರುವ ಮೊದಲ ಅಧಿಕೃತ ದ್ವಿಪಕ್ಷೀಯ ಭೇಟಿಯಾಗಿದೆ.
ಭೇಟಿಯ ಬೆನ್ನಲ್ಲೇ ಪ್ರಧಾನಿ ಮೆಲೋನಿ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ಹೊಸ ಮತ್ತು ಅದ್ಭುತವಾದ ಸೆಲ್ಫಿಯೊಂದನ್ನು ಹಂಚಿಕೊಂಡಿದ್ದಾರೆ. ಅದಕ್ಕೆ “ರೋಮ್‌ಗೆ ಸ್ವಾಗತ, ನನ್ನ ಸ್ನೇಹಿತ” ಎಂಬ ಹೃದಯಸ್ಪರ್ಶಿ ಶೀರ್ಷಿಕೆ ನೀಡಿದ್ದು, ಈ ಫೋಟೋ ಇಂಟರ್ನೆಟ್‌ನಲ್ಲಿ ಜಾಗತಿಕ ಮಟ್ಟದಲ್ಲಿ ತ್ವರಿತವಾಗಿ ವೈರಲ್ ಆಗಿದೆ.
ಕೆಲ ಕಲಾವಿದರು ಭಾರತೀಯ ಶಾಸ್ತ್ರೀಯ ಸಂಗೀತ ಪ್ರದರ್ಶನ ನೀಡಿದರೆ, ಯುವಕರು ಭಾರತ–ಇಟಲಿ ಸ್ನೇಹವನ್ನು ಪ್ರತಿಬಿಂಬಿಸುವ ಕಲಾ ಪ್ರದರ್ಶನಗಳನ್ನು ಆಯೋಜಿಸಿದರು.
ಮೋದಿ ಅವರು ಅಲ್ಲಿನ ಭಾರತೀಯ ಸಮುದಾಯದವರ ಜೊತೆ ಕೆಲ ಸಮಯ ಮಾತುಕತೆ ನಡೆಸಿ, ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡರು.
Bathroom Vastu Tips ಬಾತ್‌ರೂಂನಲ್ಲಿ ಇಟ್ಟಿರುವ ಈ ವಸ್ತು ನಿಮ್ಮ ಮನೆಗೆ ಬಡತನವನ್ನು ತರುತ್ತದೆ