Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಸೋಲು : ಮೈದಾನದಲ್ಲೇ ನಾಯಕ ಶ್ರೇಯಸ್‌ಗೆ ಹಿಗ್ಗಾಮುಗ್ಗ ಬೈದ ಪ್ರೀತಿ ಜಿಂಟಾ!
ದೇಶಪ್ರಮುಖ

ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಸೋಲು : ಮೈದಾನದಲ್ಲೇ ನಾಯಕ ಶ್ರೇಯಸ್‌ಗೆ ಹಿಗ್ಗಾಮುಗ್ಗ ಬೈದ ಪ್ರೀತಿ ಜಿಂಟಾ!

Share
1 Min Read
SHARE

newsics.com/ನ್ಯೂಸಿಕ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಸದ್ಯ ಸತತ ಸೋಲಿನ ಹಾದಿಯಲ್ಲಿದೆ. ಆರಂಭದಲ್ಲಿ ಸತತ ಗೆಲುವುಗಳೊಂದಿಗೆ ಲೀಗ್‌ನಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ , ಈಗ ಡಬಲ್ ಹ್ಯಾಟ್ರಿಕ್ ಸೋಲಿನೊಂದಿಗೆ ಅಭಿಮಾನಿಗಳನ್ನು ತೀವ್ರ ಆಘಾತಕ್ಕೆ ದೂಡಿದೆ. ಆರಂಭದಲ್ಲಿ ಎದುರಾಳಿಗಳನ್ನು ಸಿಂಹದಂತೆ ಬೇಟೆಯಾಡಿದ್ದ ಪಂಜಾಬ್, ಈಗ ಅದೇ ಎದುರಾಳಿಗಳಿಗೆ ಸದ್ದಿಲ್ಲದೆ ಬಲಿಯಾಗಿದೆ.

 

ಟೂರ್ನಿಯ ಆರಂಭದ ಆರು ಪಂದ್ಯಗಳಲ್ಲಿ ಸತತವಾಗಿ ಗೆಲುವು ಕಂಡಿದ್ದ ಪಂಜಾಬ್ ಕಿಂಗ್ಸ್ ಸದ್ಯ ಸತತ ಆರು ಸೋಲುಗಳನ್ನು ಕಂಡಿದ್ದು ಈ ಸೋಲು ಅವರ ಪ್ಲೇಆಫ್ ಕನಸಿಗೆ ಬಹು ದೊಡ್ಡ ಹಿನ್ನಡೆಯನ್ನುಂಟುಮಾಡಿ ಉಳಿದ ಒಂದು ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿಹಾಕಿಕೊಂಡಿದೆ.

ಅಂಕಪಟ್ಟಿಯಲ್ಲಿ 13 ಅಂಕಗಳನ್ನು ಹೊಂದಿದ್ದ ಪಂಜಾಬ್ ಕಿಂಗ್ಸ್ ಪಾಲಿಗೆ 13ನೇ ಪಂದ್ಯವಾಗಿದ್ದ ಈ ಪಂದ್ಯವನ್ನು ಗೆದ್ದಿದ್ದರೆ 15 ಅಂಕಗಳನ್ನು ಮುಟ್ಟಬಹುದಾಗಿದ್ದ ಕಾರಣ ಆರ್‌ಸಿಬಿ ವಿರುದ್ಧದ ಈ ಪಂದ್ಯ ತಂಡಕ್ಕೆ ಬಹು ಮುಖ್ಯದ್ದಾಗಿತ್ತು.

ಸೋಲಿಲ್ಲದ ಸರದಾರರಂತೆ ಮೆರೆದಿದ್ದ ತಂಡ ಈಗ ಪ್ಲೇಆಫ್ ಪ್ರವೇಶ ಅನುಮಾನ ಬಿಡಿ ಎನ್ನುವ ಹಂತ ತಲುಪಿದ್ದು ಆರ್‌ಸಿಬಿ ವಿರುದ್ಧ ಸೋತ ಬೆನ್ನಲ್ಲೇ ತಂಡಕ್ಕಿದ್ದ ಪ್ಲೇಆಫ್ ಆಸೆ ಬಹುತೇಕ ಕಳೆಗುಂದಿದೆ.

 

ಹೀಗೆ ಮಕಾಡೆ ಮಲಗಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್‌ನನ್ನು ತಂಡದ ಮಾಲಕಿ ಪ್ರೀತಿ ಜಿಂಟಾ ಪಂದ್ಯ ಮುಗಿದ ಬಳಿಕ ಮೈದಾನದಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊದಲ್ಲಿ ಜಿಂಟಾ ಶ್ರೇಯಸ್‌ಗೆ ಕೈ ತೋರಿಸುತ್ತಾ ನಿಂದಿಸುತ್ತಿದ್ದಾರೆ.

ಆದರೆ ಅಸಲಿಯತ್ತಿಗೆ ಇದೊಂದು ನಕಲಿ ಚಿತ್ರವಾಗಿದ್ದು, ಎಐ ತಂತ್ರಜ್ಞಾನ ಬಳಸಿ ತಯಾರಿಸಿದ್ದಾಗಿದೆ. ನಿನ್ನೆ ಇಂತಹ ಯಾವುದೇ ಘಟನೆ ನಡೆಯದಿದ್ದು, ಬೇಕಂತಲೇ ಸಾಮಾಜಿಕ ಜಾಲತಾಣದಲ್ಲಿ ತನ್ನ ಖಾತೆ ಹೆಚ್ಚು ಜನರಿಗೆ ತಲುಪಬೇಕು ಎಂಬ ಕಾರಣಕ್ಕೆ ಈ ರೀತಿ ಎಡಿಟ್ ಮಾಡಿ ಫೋಟೊವನ್ನು ಹರಿಬಿಡಲಾಗಿದೆ.

 

ಸತ್ಯಾಂಶವನ್ನು ಪರಿಶೀಲಿಸಿ ನೋಡಿದರೆ ಪ್ರೀತಿ ಜಿಂಟಾ ಪಂದ್ಯದ ಫಲಿತಾಂಶದ ಬಗ್ಗೆ ನಾಯಕ ಶ್ರೇಯಸ್ ಜತೆ ಸಮಾಧಾನವಾಗಿಯೇ ಮಾತನಾಡುತ್ತಿರುವ ಅಸಲಿ ಫೋಟೊ ಲಭ್ಯವಾಗಿದ್ದು, ಇಲ್ಲಿದೆ ನೋಡಿ.

https://x.com/uf2151593/status/2056070620967051563?ref_src=twsrc%5Etfw%7Ctwcamp%5Etweetembed%7Ctwterm%5E2056070620967051563%7Ctwgr%5E0127d0e7913c6e567263dba8e7e55b624a52aec8%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadadunia-epaper-kannadad%2Faarsibiviruddhahinaayasolupleaafgeiddhaonduchaanssahahoytallamaidaanadallenaayakashreyasgehiggaamuggabaidhapritijinta-newsid-n712643461

ಸಾರಿಗೆ ಮುಷ್ಕರಕ್ಕೂ ಮುನ್ನ ಸಾರಿಗೆ ನೌಕರರಿಗೆ ಶಾಕ್ : KSRTC ಯಿಂದ No Work, No Pay ಆದೇಶ ಜಾರಿ

TAGGED:Punjab Kings' defeat against RCB: Preity Zinta shouts at captain Shreyas on the field!
Share This Article
Facebook Twitter Copy Link Print
Previous Article ಸಾರಿಗೆ ಮುಷ್ಕರಕ್ಕೂ ಮುನ್ನ ಸಾರಿಗೆ ನೌಕರರಿಗೆ ಶಾಕ್ : KSRTC ಯಿಂದ No Work, No Pay ಆದೇಶ ಜಾರಿ
Next Article Mahesh Babu ಮಹೇಶ್ ಬಾಬು ರೆಸ್ಟೋರೆಂಟ್‌ ನಲ್ಲಿ 1 ನೀರಿನ ಬಾಟಲಿ ರೇಟ್‌ 299, ಕೋಕ್ 180 ರೂಪಾಯಿ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?