Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Mahesh Babu ಮಹೇಶ್ ಬಾಬು ರೆಸ್ಟೋರೆಂಟ್‌ ನಲ್ಲಿ 1 ನೀರಿನ ಬಾಟಲಿ ರೇಟ್‌ 299, ಕೋಕ್ 180 ರೂಪಾಯಿ
ದೇಶಪ್ರಮುಖಮನರಂಜನೆ

Mahesh Babu ಮಹೇಶ್ ಬಾಬು ರೆಸ್ಟೋರೆಂಟ್‌ ನಲ್ಲಿ 1 ನೀರಿನ ಬಾಟಲಿ ರೇಟ್‌ 299, ಕೋಕ್ 180 ರೂಪಾಯಿ

Share
2 Min Read
SHARE

newsics.com/ನ್ಯೂಸಿಕ್ಸ್

ಹೈದರಾಬಾದ್​: ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಮಹೇಶ್​​ ಬಾಬು ಸಹಭಾಗಿತ್ವದ ಹೈದರಾಬಾದ್‌ನ ಐಷಾರಾಮಿ ರೆಸ್ಟೋರೆಂಟ್‌ನಲ್ಲಿ ನೀರಿನ ಬಾಟಲ್‌ಗೆ 299 ಮತ್ತು ಡೈಟ್ ಕೋಕ್‌ಗೆ 180 ಬೆಲೆ ನಿಗದಿಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಫುಡ್ ಬ್ಲಾಗರ್ ಒಬ್ಬರು ರೆಸ್ಟೋರೆಂಟ್ ಬಿಲ್ ವಿಡಿಯೊ ಹಂಚಿಕೊಂಡ ಬಳಿಕ ಈ ವಿಚಾರ ವೈರಲ್ ಆಗಿದೆ.

ಈಗಾಗಲೇ ಏಷ್ಯನ್ ಗ್ರೂಪ್‌ನೊಂದಿಗೆ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಅನ್ನು ನಡೆಸುತ್ತಿರುವ ಮಹೇಶ್ ಬಾಬು ಅವರು ಏಷ್ಯನ್ ಗ್ರೂಪ್ ಮತ್ತು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರ ಜೊತೆ ಎಎನ್ ರೆಸ್ಟೋರೆಂಟ್ಸ್‌ ಹೆಸರಿನಲ್ಲಿ ಐಷಾರಾಮಿ ಹೋಟೆಲ್‌ಗಳನ್ನು ಕೂಡ ನಡೆಸುತ್ತಿದ್ದಾರೆ. ಪ್ರಸಿದ್ಧ ರೆಸ್ಟೋರೆಂಟ್ ಬ್ರ್ಯಾಂಡ್ ಮಿನರ್ವಾ ಕಾಫಿ ಶಾಪ್ ಸಹಭಾಗಿತ್ವದಲ್ಲಿ ಹೈದರಾಬಾದ್‌ನ ಶರತ್ ಸಿಟಿ ಕ್ಯಾಪಿಟಲ್ ಮಾಲ್‌ನಲ್ಲಿ ನಡೆಯುತ್ತಿರುವ ಈ ಹೋಟೆಲ್‌ಗಳ ಗ್ರೂಪ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ..ಬಿಸಿ ‌ಚರ್ಚೆಯಾಗಿದೆ.

ಇತ್ತೀಚೆಗೆ ಹೈದರಾಬಾದ್‌ನ ಪ್ರಸಿದ್ಧ ಫುಡ್‌ ವ್ಲಾಗರ್‌ ಒಬ್ಬರು ಬಂಜಾರ್ ಹಿಲ್ಸ್ ರಸ್ತೆ ಸಂಖ್ಯೆ 12ರಲ್ಲಿರುವ ಮಹೇಶ್ ಬಾಬು ಅವರ ಐಷಾರಾಮಿ ರೆಸ್ಟೋರೆಂಟ್‌ಗೆ (AVN ಪ್ಯಾಲೇಸ್ ಹೈಟ್ಸ್) ಭೇಟಿ ಕೊಟ್ಟಿದ್ದರು. ಅಲ್ಲಿನ ಆಹಾರದ ಅನುಭವವನ್ನು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಮಹೇಶ್ ಬಾಬು ರೆಸ್ಟೋರೆಂಟ್‌ನಲ್ಲಿ ಒಂದು ಲೀಟರ್ ನೀರಿನ ಬಾಟಲಿಗೆ ಕನಿಷ್ಠ 299 ರೂಪಾಯಿ ಖರ್ಚು ಮಾಡಬೇಕು. ಹಾಗೆಯೇ, ಹೊರಗೆ 40 ರೂಪಾಯಿಗೆ ಸಿಗುವ ಕೋಕ್ ಕ್ಯಾನ್‌ಗೆ ಇಲ್ಲಿ 180 ರೂಪಾಯಿ. ಇಷ್ಟು ದುಬಾರಿ ಬೆಲೆ ಕೊಟ್ಟು ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನ ಹೋಗಲು ಸಾಧ್ಯವಿಲ್ಲ. ಕೇವಲ ಸೆಲೆಬ್ರಿಟಿಗಳು, ಕೋಟ್ಯಾಧಿಪತಿಗಳು ಮಾತ್ರ ಈ ರೆಸ್ಟೋರೆಂಟ್‌ಗೆ ಕಾಲಿಡಬಹುದು.

ನೀರಿನ ಬಾಟಲಿ, ಕೋಕ್ ಬೆಲೆಯೇ ಹೀಗಿದ್ದರೆ, ಇನ್ನು ಮುಖ್ಯ ಮೆನು ಬೆಲೆ ಹೇಗಿರಬೇಡ? ಸ್ಟಾರ್ಟರ್ಸ್ ವಿಷಯಕ್ಕೆ ಬಂದರೆ, ಒಂದು ಚಿಕನ್ ಟಿಕ್ಕಾಗೆ 725 ರೂಪಾಯಿ. ಇದು ಒಬ್ಬ ವ್ಯಕ್ತಿಗೆ ಹೊಟ್ಟೆ ತುಂಬುವಷ್ಟೂ ಇರುವುದಿಲ್ಲ. ಅದೇ ರೀತಿ ಮಟನ್ ಬಿರಿಯಾನಿಗೆ 600 ರೂಪಾಯಿ. ಇದೂ ಕೂಡ ಒಬ್ಬರಿಗೆ ಸಾಕಾಗುವುದಿಲ್ಲ. ಇವುಗಳ ಮೇಲೆ ತೆರಿಗೆ ಮತ್ತು ಇತರೆ ಶುಲ್ಕಗಳು ಬೇರೆ. ಒಬ್ಬ ವ್ಯಕ್ತಿ ಹೊಟ್ಟೆ ತುಂಬಾ ಊಟ ಮಾಡಬೇಕೆಂದರೆ ಮಹೇಶ್ ಬಾಬು ರೆಸ್ಟೋರೆಂಟ್‌ನಲ್ಲಿ ಕನಿಷ್ಠ 2,000 ರೂಪಾಯಿ ಖರ್ಚು ಮಾಡಬೇಕು.

ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆದ ಬಿಲ್ ವೈರಲ್ ಆಗುತ್ತಿದ್ದಂತೆ, ಮಹೇಶ್ ಬಾಬು ರೆಸ್ಟೋರೆಂಟ್ ಬಗ್ಗೆ ಕಾಮೆಂಟ್‌ಗಳು ಹೆಚ್ಚಾಗಿವೆ. ‘ಸೆಲೆಬ್ರಿಟಿ ಬ್ರ್ಯಾಂಡ್‌ಗಳ ಹಿಂದೆ ಹೋದರೆ ಜೇಬು ಖಾಲಿಯಾಗುತ್ತೆ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

https://www.newsics.com/2026/05/18/punjab-kings-defeat-against-rcb-preity-zinta-shouts-at-captain-shreyas-on-the-field/

TAGGED:a bottle of water costs Rs 299and a Coke costs Rs 180.At Mahesh Babu's restaurant
Share This Article
Facebook Twitter Copy Link Print
Previous Article ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಸೋಲು : ಮೈದಾನದಲ್ಲೇ ನಾಯಕ ಶ್ರೇಯಸ್‌ಗೆ ಹಿಗ್ಗಾಮುಗ್ಗ ಬೈದ ಪ್ರೀತಿ ಜಿಂಟಾ!
Next Article Woman dies by elephant ಎಲಿಫೆಂಟ್ ಬಾತಿಂಗ್ ವೇಳೆ ಮೈಮೇಲೆ ಆನೆ ಬಿದ್ದು ಮಹಿಳೆ ಸಾವು, ಪತಿ ಗಂಭೀರ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?