newsics.com
ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ದರ್ಶನ್ ಹಾಗೂ ಅವರ ಗ್ಯಾಂಗ್ ವಿರುದ್ಧ 3ರಿಂದ 4 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದರ್ಶನ್ ಮತ್ತು ಗ್ಯಾಂಗ್ ರೇಣುಕಾ ಸ್ವಾಮಿ ಅವರನ್ನು ಕರೆತಂದಾಗಿನಿಂದ ನಾಲ್ವರ ಸರೆಂಡರ್ ಆಗುವವರೆಗಿನ ವೃತ್ತಾಂತವನ್ನು ತೋರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವರದಿ ಆಗಿದೆ.
ಖ್ಯಾತ ಸೆಲೆಬ್ರಿಟಿ. ಹೀಗಾಗಿ, ಇದು ಹೈ ಪ್ರಾಫೈಲ್ ಕೇಸ್ ಎನಿಸಿಕೊಂಡಿದೆ. ಹೀಗಾಗಿ, ಘಟನೆಯ ಕುರಿತು ಹಲವು ಸಾಕ್ಷ್ಯಧಾರಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಹಲವು ಆಯಾಮಗಳಲ್ಲಿ ಪ್ರಕರಣದ ಸೂಕ್ಷ್ಮತೆ ಅರಿತು ಪೊಲೀಸರು ಕೆಲಸ ಮಾಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಸಿಆರ್ಪಿಸಿ 164 ಅಡಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಪೊಲೀಸರ ಮುಂದೆ ಒಂದು ಹೇಳಿಕೆ ನೀಡುವ ಸಾಕ್ಷಿಗಳು, ಕೋರ್ಟ್ಮುಂದೆ ಬೇರೆಯದೇ ಹೇಳಿಕೆ ನೀಡುತ್ತಾರೆ. ಹೀಗಾಗಬಾರದು ಎನ್ನುವ ಕಾರಣಕ್ಕೆ ಒಟ್ಟಾರೆ 25 ಸಾಕ್ಷ್ಯಗಳನ್ನು ಕರೆತಂದು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು ಮಾಡಲಾಗಿದೆ. ಇದು ಪ್ರಕರಣದಲ್ಲಿ ಪ್ರಮುಖ ಎನಿಸಿಕೊಂಡಿದೆ.
ಸದ್ಯ ಪೊಲೀಸ್ ಟೀಂ ಎಲ್ಲದಕ್ಕೂ ಹಣದ ಲೆಕ್ಕ ಇಟ್ಟಿದೆ. ಪ್ರತಿಯೊಂದು ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ದಾಖಲು ಮಾಡಿಕೊಳ್ಳಲಿದೆ. ಕೃತ್ಯದಲ್ಲಿ ಆರೋಪಿಗಳ ಪಾತ್ರದ ಕುರಿತು ಉಲ್ಲೇಖ ಮಾಡಲಾಗುತ್ತದೆ.