newsics.com/ನ್ಯೂಸಿಕ್ಸ್
ಸರ್ಕಾರಿ ಕಚೇರಿಗಳಲ್ಲಿ ಉನ್ನತ ಅಧಿಕಾರಿಗಳ ಕೊಠಡಿಗೆ ಹೋದರೆ ಅಲ್ಲಿನ ಕುರ್ಚಿಯ ಮೇಲೆ ಬಿಳಿ ಟವಲ್ ಹೊದಿಸಿರುವುದು ಸಾಮಾನ್ಯ ದೃಶ್ಯ. ಇಂದಿಗೂ ಮುಂದುವರಿದಿರುವ ಈ ಬ್ರಿಟಿಷ್ ಯುಗದ ಪದ್ಧತಿಯನ್ನು ಕೊನೆಗೊಳಿಸುವಂತೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಸಾಮಾಜಿಕ ಕಾರ್ಯಕರ್ತೆ ಲಿಸಿಪ್ರಿಯಾ ಕಾಂಜುಗಂ ಮನವಿ ಮಾಡಿದ್ದರು.
https://youtube.com/shorts/qM17NYCF6QQ?si=P9kdXfY-X5l0cveO
ಈ ವಿನಂತಿ ಮಾಡಿದ ಕೇವಲ 24 ಗಂಟೆಗಳ ಒಳಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಒಂದು ದೊಡ್ಡ ಬದಲಾವಣೆ ಕಂಡುಬಂದಿದ್ದು, ಇಡೀ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸರ್ಕಾರಿ ಕುರ್ಚಿಗಳಿಗೆ ಬಿಳಿ ಟವಲ್ ಹಾಕುವ ಈ ಪದ್ಧತಿ ಇಂದಿನದಲ್ಲ, ಇದು 19ನೇ ಶತಮಾನದ ಬ್ರಿಟಿಷ್ ರಾಜ್ ಕಾಲದ್ದು. ಅಂದು ಬ್ರಿಟಿಷ್ ಅಧಿಕಾರಿಗಳು ತಲೆಗೆ ಮಕಾಸರ್ ಆಯಿಲ್ ಬಳಸುತ್ತಿದ್ದರು. ಬೆಲೆಬಾಳುವ ಪೀಠೋಪಕರಣಗಳಿಗೆ ತೈಲದ ಕಲೆ ತಗುಲಬಾರದು ಎಂಬ ಕಾರಣಕ್ಕೆ ಆಂಟಿ-ಮಕಾಸರ್ ಎಂಬ ಬಟ್ಟೆಯನ್ನು ಬಳಸಲಾಗುತ್ತಿತ್ತು.
ಭಾರತದ ಉಷ್ಣ ಹವಾಮಾನದಲ್ಲಿ ಬೆವರಿನ ಕಲೆ ತಪ್ಪಿಸಲು ಇದು ಪೂರ್ಣ ಪ್ರಮಾಣದ ಬಿಳಿ ಟವಲ್ ಆಗಿ ಬದಲಾಯಿತು. ಆದರೆ, ಕಾಲಕ್ರಮೇಣ ಇದು ಸ್ವಚ್ಛತೆಯ ಸಂಕೇತವಾಗಿ ಉಳಿಯದೆ, ಅಧಿಕಾರದ ಮತ್ತು ಶ್ರೇಣೀಕೃತ ವ್ಯವಸ್ಥೆಯ ಸಂಕೇತವಾಗಿ ಬದಲಾಗಿತ್ತು.
ಲಿಸಿಪ್ರಿಯಾ ಕಂಗುಜಮ್ ಅವರು ವಿಜಯ್ ಅವರ ಈ ನಡೆಗೆ ಕೃತಜ್ಞತೆ ಸಲ್ಲಿಸಿದ್ದು, ವಿಜಯ್ ಅವರು ಜನಸಾಮಾನ್ಯರ ಧ್ವನಿಯನ್ನು ಆಲಿಸುವ ನಾಯಕ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ. ಕಳೆದ ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ವಿಜಯ್, ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ಹೊಸ ರಾಜಕೀಯ ಭವಿಷ್ಯ ಬರೆಯುತ್ತಿದ್ದಾರೆ.