newsics.com/ನ್ಯೂಸಿಕ್ಸ್
ದಳಪತಿ ವಿಜಯ್ ಅವರು ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲೇ ಭರ್ಜರಿ ಗೆಲುವು ಸಾಧಿಸಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
https://youtube.com/shorts/qM17NYCF6QQ?si=P9kdXfY-X5l0cveO
ಆದರೆ, ಈ ಸಂಭ್ರಮದ ನಡುವೆಯೇ ವಿಜಯ್ ಅವರ ಅತ್ಯಪ್ತ ಗೆಳತಿ ಹಾಗೂ ಲಕ್ಕಿ ಹೀರೋಯಿನ್ ತ್ರಿಶಾ ಕೃಷ್ಣನ್ ಒಂದು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದು, ಈಗ ಅದು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹರಡುತ್ತಿದೆ.
ರಾಜಕೀಯವಾಗಿ ದಳಪತಿ ವಿಜಯ್ ಅವರ ಪಾಲಿಗೆ ಪ್ರಬಲ ಎದುರಾಳಿ ಎಂದರೆ ಅದು ಸ್ಟಾಲಿನ್ ಕುಟುಂಬ. ಈಗ ತ್ರಿಶಾ ಅವರು ನೇರವಾಗಿ ಆ ಕುಟುಂಬದ ಜೊತೆ ಕೈಜೋಡಿಸಿರುವುದು ವಿಜಯ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಹೌದು, ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಉಲಗನಾಯಗನ್ ಕಮಲ್ ಹಾಸನ್ ಒಟ್ಟಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾದಲ್ಲಿ ತ್ರಿಶಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಸಲಿ ವಿಷಯವೇನೆಂದರೆ, ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರ ಮೊಮ್ಮಗ ಮತ್ತು ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿಧಿ ಸ್ಟಾಲಿನ್!
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಮೆಗಾ ಪ್ರಾಜೆಕ್ಟ್ ಈಗಾಗಲೇ ಒಂದು ಸಣ್ಣ ವೀಡಿಯೋ ಮೂಲಕ ಸಂಚಲನ ಮೂಡಿಸಿದೆ. ರಜನಿ ಮತ್ತು ಕಮಲ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಈಗ ತ್ರಿಶಾ ಈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ತ್ರಿಶಾ ಈಗಾಗಲೇ ರಜನಿಕಾಂತ್ ಜೊತೆ ‘ಪೆಟ್ಟಾ’ ಮತ್ತು ಕಮಲ್ ಹಾಸನ್ ಜೊತೆ ‘ಮನ್ಮಧನ್ ಅಂಬು’ನಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ಬಾರಿಯೂ ಅವರು ದೊಡ್ಡ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತ್ರಿಶಾ ಅವರು ವಿಜಯ್ ವಿರುದ್ಧ ರಾಜಕೀಯವಾಗಿ ಸ್ಪರ್ಧಿಸುತ್ತಿಲ್ಲವಾದರೂ, ಸ್ಟಾಲಿನ್ ಕುಟುಂಬದ ಸಿನಿಮಾದಲ್ಲಿ ಭಾಗಿಯಾಗುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.