newsics.com/ನ್ಯೂಸಿಕ್ಸ್
ನೀಟ್-ಯುಜಿ 2026 ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಹಿನ್ನೆಲೆ ಪರೀಕ್ಷೆ ರದ್ದುಗೊಳಿಸಲಾಗಿದೆ. ಸದ್ಯ, ಈ ಪ್ರಕರಣಕ್ಕೆ ಸಿಬಿಐಗೆ ಎಂಟ್ರಿ ಕೊಟ್ಟಿದೆ, ಪ್ರಕರಣದ ಕಿಂಗ್ಪಿನ್ ಅನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸೋರಿಕೆಯಾದ ಪತ್ರಿಕೆ ರಾಜಸ್ಥಾನದ ಸಿಕರ್ ತಲುಪಿದೆ. ಇಲ್ಲಿಂದ ಹರಿಯಾಣ, ಕೇರಳದ ಮೂಲಕ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಹರಿಯ ಬಿಡಲಾಗಿದೆ. ಪಾಸ್‌ವರ್ಡ್ ರಕ್ಷಣೆಯಲ್ಲಿ ಪಿಡಿಎಫ್ ಮಾದರಿಯ ದಾಖಲೆಯನ್ನು ಹಂಚಿಕೊಳ್ಳಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಮೇ 3 ರಂದು ನಡೆದ ನೀಟ್ ಪ್ರವೇಶ ಪರೀಕ್ಷೆಗೂ ಮೊದಲು ಪ್ರಶ್ನೆಪತ್ರಿಕೆ ಯನ್ನು ವಾಟ್ಸ್ಆ್ಯಪ್, ಟೆಲಿಗ್ರಾಂ ಗ್ರೂಪ್ ಮೂಲಕ ಹರಿಯ ಬಿಡಲಾಗಿದೆ. ವಾಟ್ ಆ್ಯಪ್ ಚಾಟ್‌ಗಳನ್ನು ಡಿಕೋಡ್ ಮಾಡಿರುವ ತನಿಖಾಧಿಕಾರಿಗಳು, ಪ್ರಶ್ನೆ ಪತ್ರಿಕೆಯನ್ನು ಕನಿಷ್ಠ 30 ಸಾವಿರ ರೂ. ಗಳಿಂದ 28 ಲಕ್ಷರೂ.ಗೆ ಮಾರಾಟ ಮಾಡಲಾಗಿದೆ. ಅಕ್ರಮದ ಹಿಂದೆ ಸಂಘಟಿತ ಅಪರಾಧಿಗಳ ಗುಂಪು ಕೆಲಸ ಮಾಡಿರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಈ ಸಮಸ್ಯೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಲವಾರು ಕೋಚಿಂಗ್ ಸೆಂಟರ್ಗಳು ಮತ್ತು ಹಾಸ್ಟೆಲ್ ಜಾಲಗಳು ಸಹ ಭಾಗಿಯಾಗಿವೆ ಎನ್ನಲಾಗಿದೆ. ಸದ್ಯ ಇದರಲ್ಲಿ ಶಾಮೀಲಾಗಿರುವುದು ಖಚಿತವೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸಿಕಾರ್‌ನ ತರಬೇತಿ ಕೇಂದ್ರ ವ್ಯವಸ್ಥಾಪಕನನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.
https://www.newsics.com/2026/05/13/how-was-dilip-rajs-cinematic-journey/