newsics.com/ನ್ಯೂಸಿಕ್ಸ್
ತಮಿಳುನಾಡಿನರಾಜಕೀಯಇತಿಹಾಸದಲ್ಲಿ ಹೊಸ ಶಕೆಯನ್ನು ಬರೆಯಲು ಹೊರಟಿರುವ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ(TVK)ಪಕ್ಷಕ್ಕೆ ಇದೀಗ ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ತಲುಪಲು ಎಡಪಕ್ಷಗಳು ಮತ್ತು ಮೈತ್ರಿ ಪಕ್ಷಗಳು ವಿಜಯ್ಗೆ ಸಾಥ್ ನೀಡಿವೆ.
ಮೂಲಕ ಅಗತ್ಯ ಶಾಸಕರ ಬೆಂಬಲ ಗಳಿಸಿರುವ ವಿಜಯ್, ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಇದೀಗ ನಿಶ್ಚಿತ ಎನ್ನಲಾಗುತ್ತಿದೆ.
ಮುಖ್ಯಾಂಶಗಳು
ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆಯ ಹಾದಿ ಸುಗಮ
ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಬಗ್ಗೆ ಸಂತೋಷ್ ಪೋಸ್ಟ್
ಜಿಬಿಎ ಚುನಾವಣೆಗೆ ಮುಹೂರ್ತ ಫಿಕ್ಸ್?
ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ 108 ಸ್ಥಾನಗಳಲ್ಲಿ ಈಗಾಲೇ ವಿಜಯ್ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದ್ದಾರೆ. ಪೆರಂಬೂರ್ ಹಾಗೂ ತಿರುಚ್ಚಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯ್ ಎರಡೂ ಕಡೆ ಜಯಗಳಿಸಿದ್ದು, ಶಾಸಕರ ಎಣಿಕೆಯ ನಿಯಮದಂತೆ ಸದ್ಯಕ್ಕೆ ಅವರ ಪಕ್ಷದ ಬಲ 107ಕ್ಕೆ ಸ್ಥಿರವಾಗಿದೆ.
ಸಿಪಿಐ ಪಕ್ಷವು ಟಿವಿಕೆಗೆ ಬೇಷರತ್ ಬೆಂಬಲ ಘೋಷಿಸಿದ್ದು, ಇದರೊಂದಿಗೆ ಸಿಪಿಐ(ಎಂ) ಹಾಗೂ ವಿಸಿಕೆ ಪಕ್ಷಗಳು ಸಹ ವಿಜಯ್ ಬೆನ್ನಿಗೆ ನಿಂತಿವೆ. ಪ್ರಸ್ತುತ ಟಿವಿಕೆಯ 107 ಸ್ಥಾನಗಳೊಂದಿಗೆ ಕಾಂಗ್ರೆಸ್‌ನ 5, ವಿಸಿಕೆಯ 2, ಸಿಪಿಐನ 2 ಹಾಗೂ ಸಿಪಿಐ(ಎಂ)ನ 2 ಸ್ಥಾನಗಳು ಸೇರಿದಂತೆ ಒಟ್ಟು ಬಲ 118ಕ್ಕೆ ಏರಿದೆ ಆಗಿದೆ.
ತಮಿಳುನಾಡು ಸರ್ಕಾರ ರಚನೆ ಕುರಿತು ಬಿಎಲ್ ಸಂತೋಷ್ ಮಾರ್ಮಿಕ ಪೋಸ್ಟ್
ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಯ ಕಸರತ್ತು ಗರಿಗೆದರಿರುವ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿರುವ ಅವರು, “ತಮಿಳುನಾಡಿನಲ್ಲಿ ಅಂತಿಮವಾಗಿ ಯಾರು ಸರ್ಕಾರ ರಚಿಸುತ್ತಾರೆ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ಆದರೆ ಒಂದು ವಿಷಯ ಮಾತ್ರ ಖಚಿತ, ಈ ಎಲ್ಲಾ ಬೆಳವಣಿಗೆಗಳ ಕೊನೆಯಲ್ಲಿ ಕಾಂಗ್ರೆಸ್ ಪಕ್ಷವು ಮುಖಕ್ಕೆ ಮೊಟ್ಟೆ ಹೊಡೆಸಿಕೊಳ್ಳುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ,” ಎಂದಿದ್ದಾರೆ.
ಜಿಬಿಎ ಚುನಾವಣೆಗೆ ಮುಹೂರ್ತ ಫಿಕ್ಸ್: ಜೂನ್ 14 ರಿಂದ 24ರ ನಡುವೆ ಬೆಂಗಳೂರಿನಲ್ಲಿ ಮತದಾನ?
ಬಹು ನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗುವ ಲಕ್ಷಣಗಳು ಗೋಚರಿಸಿದ್ದು, ಜೂನ್ 14 ರಿಂದ ಜೂನ್ 24ರ ನಡುವೆ ಮತದಾನ ನಡೆಯುವ ಸಾಧ್ಯತೆಯಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಜೂನ್ 30ರ ಒಳಗಾಗಿ ಚುನಾವಣೆ ಪ್ರಕ್ರಿಯೆ ಮುಗಿಸಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಆಯೋಗವು ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಮಳೆಗಾಲ ಮತ್ತು ಶಾಲಾ-ಕಾಲೇಜುಗಳ ಆರಂಭದ ಸಮಯವನ್ನು ಗಮನದಲ್ಲಿಟ್ಟುಕೊಂಡು ಅಂತಿಮ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.