newsics.com/ನ್ಯೂಸಿಕ್ಸ್
ಟಿವಿಕೆ ಪಕ್ಷದ ವಿಜಯ್ ಅವರು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದರು. ಈ ಹಿನ್ನೆಲೆಯಲ್ಲಿ ಅವರ ‘ಜನ ನಾಯಗನ್’ ಚಿತ್ರದ ನಟಿ ಪೂಜಾ ಹೆಗ್ಡೆ ಅವರು ವಿಜಯ್ ಜೊತೆಗಿನ ಫೋಟೋವನ್ನು ಹಂಚಿಕೊಂಡು ವಿಶೇಷವಾಗಿ ಅಭಿನಂದಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
https://youtube.com/shorts/iatQVbaFb3g?si=I11csgvje-MFvvAP
ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ಜನ ನಾಯಗನ್’ ಚಿತ್ರದ ಶೂಟಿಂಗ್ ಸೆಟ್‌ನ ಹಳೆಯ ವಿಡಿಯೋವೊಂದನ್ನು ಪೂಜಾ ಅವರು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಅಲ್ಲಿನ ಬೋರ್ಡ್ ಒಂದರ ಮೇಲೆ ‘ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?’ ಎಂದು ಬರೆಯಲಾಗಿತ್ತು. ಆಗ ಪೂಜಾ ಹೆಗ್ಡೆ ಅವರು ತಮಾಷೆಯಾಗಿ ತಮ್ಮ ಪಕ್ಕದಲ್ಲೇ ನಿಂತಿದ್ದ ವಿಜಯ್ ಅವರತ್ತ ಬೆರಳು ಮಾಡಿ ತೋರಿಸಿದ್ದರು. ಪೂಜಾ ಅವರ ಈ ಮಾತಿಗೆ ವಿಜಯ್ ಅವರು ಮುಗುಳ್ನಗುತ್ತಾ ನಾಚಿಕೊಂಡಿದ್ದರು.
ಅಂದು ಪೂಜಾ ಹೆಗ್ಡೆ ತಮಾಷೆಯಾಗಿ ನುಡಿದಿದ್ದ ಈ ಭವಿಷ್ಯವಾಣಿ ಇಂದು ನಿಜವಾಗಿದೆ. ವಿಜಯ್ ಅವರ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಸರ್ಕಾರ ರಚಿಸಲು ಸಜ್ಜಾಗಿದೆ.
https://www.instagram.com/reel/DX9DwRWTKIq/?igsh=MWpheWF0NzgxZjhhdA==
https://www.newsics.com/2026/05/05/traffic-disruption-on-namma-metro-purple-line-train-stalled/