newsics.com/ನ್ಯೂಸಿಕ್ಸ್
ಆಸ್ಪತ್ರೆಯ ಹಾಸಿಗೆಯ ಮೇಲೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ತಂದೆಯ ಪಕ್ಕದಲ್ಲಿರಬೇಕಾದ ಮಗನಿಗೆ ಆ ಕ್ಷಣದಲ್ಲಿ ಆಫೀಸ್ನ ಅರ್ಜೆಂಟ್ ರಿಪೋರ್ಟ್ ಎಂಬುದು ಬೆಲೆ ಇಲ್ಲದ ಕಾಗದದಂತೆ ಕಾಣುವುದು ಸಹಜ. ಇಂತಹದೇ ಒಂದು ಭಾವನಾತ್ಮಕ ಸನ್ನಿವೇಶದ ಸಮಯದಲ್ಲಿ ಉದ್ಯೋಗಿ ಹಾಗೂ ಮ್ಯಾನೇಜರ್ ನಡುವಿನ ಸಂಭಾಷಣೆ ಹಾಗೂ ಉದ್ಯೋಗಿಯ ಉತ್ತರ ಈಗ ಭಾರಿ ಸದ್ದು ಮಾಡುತ್ತಿದೆ.
ಕರಿಯರ್ ಕೋಚ್ ಆಗಿ ವೃತ್ತಿ ಜೀವನದಲ್ಲಿರುವ ಸೈಮನ್ ಇಂಗಾರಿ ಎಂಬ ವ್ಯಕ್ತಿ ಒಬ್ಬ ಉದ್ಯೋಗಿ ಹಾಗೂ ಮ್ಯಾನೇಜರ್ ನಡುವಿನ ಸಂಭಾಷಣೆಯನ್ನು ತಮ್ಮ X ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.
ಸೈಮನ್ ಇಂಗಾರಿ ಹಂಚಿಕೊಂಡ ಈ ಸಂಭಾಷಣೆಯಲ್ಲಿ ಉದ್ಯೋಗಿಯೊಬ್ಬರಿಗೆ ತನ್ನ ಮ್ಯಾನೇಜರ್ ಒಂದು ರಿಪೋರ್ಟ್ ಬಹಳ ತುರ್ತುಗಾಗಿ ಬೇಕಾಗಿದ್ದು, ಆ ರಿಪೋರ್ಟ್ ಅನ್ನು ಅದೇ ದಿನದಲ್ಲಿ ಮಾಡಿ ಮುಗಿಸುವಂತೆ ಒತ್ತಾಯಿಸಿದ್ದು, ಉದ್ಯೋಗಿಗೆ ಇದಕ್ಕಾಗಿ ರಾತ್ರಿ ಓವರ್ ಟೈಂ ಮಾಡುವಂತೆ ಆದೇಶ ನೀಡಿದ್ದಾರೆ. ಆದರೆ, ಆಸ್ಪತ್ರೆಯ ಹಾಸಿಗೆಯಲ್ಲಿರುವ ತನ್ನ ತಂದೆಯ ಬಳಿ ಸಂಜೆ ಗಂಟೆಗೆ ಇರುವುದಾಗಿ ಮಾತು ಕೊಟ್ಟಿದ್ದ ಉದ್ಯೋಗಿ ಇದನ್ನು ವಿನಯವಾಗಿ ನಿರಾಕರಿಸುತ್ತಾನೆ.
ಆದ್ಯತೆಗಳನ್ನು ನೀವೇ ಆರಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ಉದ್ಯೋಗಿ ಈ ಸಂಕಷ್ಟದ ಸಮಯದಲ್ಲಿ ನನ್ನ ಕುಟುಂಬವೂ ನನ್ನನ್ನೇ ಅವಲಂಬಿಸಿದೆ. ನನ್ನ ತಂದೆ ಬೇರೆ ಯಾರನ್ನೂ ಕರೆಯದೆ ನಿರ್ದಿಷ್ಟವಾಗಿ ಕೇವಲ ನನಗಾಗಿ ಕಾಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಇದಕ್ಕೆ ಮ್ಯಾನೇಜರ್ ನಿಮ್ಮ ತಂದೆಯ ಬಳಿ ಇರಲು ಬೇರೆ ಯಾರೂ ಇಲ್ಲವೇ? ಒಂದು ರಾತ್ರಿ ಕುಟುಂಬದಿಂದ ದೂರವಿರಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದು, ಇದಕ್ಕೆ ಆ ಉದ್ಯೋಗಿ ಸ್ಪಷ್ಟವಾಗಿ ಹಾಗೂ ತೀಕ್ಷ್ಣವಾಗಿ ನೀಡಿದ್ದು, ಬಹುಶಃ ಅವರಿಗೆ ಇನ್ನು ಹೆಚ್ಚಿನ ರಾತ್ರಿಗಳು ಉಳಿದಿರಲಿಕ್ಕಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ, ನಾನು ಈಗಾಗಲೇ ಪೂರ್ಣಗೊಳಿಸಿರುವಷ್ಟು ರಿಪೋರ್ಟ್ ಒಪ್ಪಿಸುತ್ತೇನೆ, ಆದರೆ, ನಾನು ನನ್ನ ತಂದೆಯ ಬಳಿ ಹೊರಡಲೇ ಬೇಕು ಎಂದು ಖಚಿತವಾಗಿ ಹೇಳಿದ್ದಾನೆ. ಉದ್ಯೋಗಿಯ ಈ ಉತ್ತರ ಮ್ಯಾನೇಜರ್ ಅನ್ನು ಸ್ತಬ್ದಗೊಳಿಸುವಂತೆ ಮಾಡಿದ್ದು, ಕೊನೆಗೆ ಆತ ಹೊರಡಲು ಅನುಮತಿ ನೀಡಿದ್ದಾರೆ.
https://www.newsics.com/2026/05/04/actor-darshan-breaks-down-in-tears-during-bail-application/