newsics.com/ನ್ಯೂಸಿಕ್ಸ್
ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಟಾಕ್ಸಿಕ್ ಪ್ರತಿ ದಿನವೂ ಒಂದೊಂದು ಸುದ್ದಿಯೊಂದಿಗೆ ಸದ್ದು ಮಾಡುತ್ತಿದೆ. ಈಗಾಗಲೇ ಎರಡು ಬಾರಿ ರಿಲೀಸ್ ಡೇಸ್ ಪೋಸ್ಟ್ಪೋನ್ ಆಗಿದೆ. ಮೂರೂವರೆ ನಾಲ್ಕು ವರ್ಷಗಳಿಂದ ಟಾಕ್ಸಿಕ್ ಗಾಗಿ ಕಾದು ಕೂತಿದ್ದ ರಾಕಿ ಭಾಯ್ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿವಾದ ಎಬ್ಬಿಸಬಹುದಾದ ಸುದ್ದಿ ಹರಿದಾಡುತ್ತಿದೆ.
ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಐದು ಮಂದಿ ನಾಯಕಿಯರು ಇದ್ದಾರೆ. ಅವರಲ್ಲಿ ಕಿಯಾರಾ ಅಡ್ವಾಣಿ ಕೂಡ ಒಬ್ಬರು. ಈಗಾಗಲೇ ಯಶ್ ಹಾಗೂ ಕಿಯಾರಾ ಅಡ್ವಾಣಿಯ ಹಾಡು ತಬಾಹಿ ರಿಲೀಸ್ ಆಗಿದೆ. ಲಿರಿಕಲ್ ಸಾಂಗ್ ಬಿಡುಗಡೆಯಾದಾಗಲೇ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಯಶ್ ಹಾಗೂ ಕಿಯಾರಾ ಅಡ್ವಾಣಿ ಕೆಮಿಸ್ಟ್ರಿ ಬಗ್ಗೆ ಚರ್ಚೆ ಆಗಿತ್ತು
ವರದಿಗಳ ಪ್ರಕಾರ, ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಸೂಚನೆಯಂತೆ ಕಿಯಾರಾ ಈ ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ಸಮ್ಮತಿಸಿದ್ದರು. ಆದರೆ ಎಡಿಟಿಂಗ್ ನಂತರ ಸಿದ್ಧವಾದ ದೃಶ್ಯಗಳನ್ನು ನೋಡಿದಾಗ ಕಿಯಾರಾ ಅವರಿಗೆ ಮುಜುಗುರ ಉಂಟಾಗಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ಅವರು ಚಿತ್ರತಂಡಕ್ಕೆ ಆ ದೃಶ್ಯಗಳ ಉದ್ದವನ್ನು ತಕ್ಷಣವೇ ಕಡಿಮೆ ಮಾಡಲು ಅಥವಾ ಆ ದೃಶ್ಯಗಳನ್ನೇ ಚಿತ್ರದಿಂದ ಪೂರ್ಣವಾಗಿ ಕೈಬಿಡುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಈ ದೃಶ್ಯಗಳನ್ನು ಹಾಗೆಯೇ ಉಳಿಸಿಕೊಂಡರೆ ಅದು ತಮ್ಮ ಕೌಟುಂಬಿಕ ಇಮೇಜ್ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಅವರಲ್ಲಿದೆ ಎನ್ನಲಾಗಿದೆ.
ಕಿಯಾರಾ ಅಡ್ವಾಣಿ ಈ ಚಿತ್ರಕ್ಕಾಗಿ ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದು ಅವರ ವೃತ್ತಿಜೀವನದ ಅತ್ಯಂತ ಹೆಚ್ಚಿನ ಸಂಭಾವನೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಕಿಯಾರಾ ಅವರ ಈ ಮನವಿಯಿಂದಾಗಿ ಚಿತ್ರದ ಅಂತಿಮ ಎಡಿಟಿಂಗ್ನಲ್ಲಿ ಮಹತ್ವದ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ನಿರ್ದೇಶಕರಿಗೆ ಎದುರಾಗಿದೆ.
https://www.newsics.com/2026/05/03/monsoon-rains-have-started-earlier-than-expected-this-year/