newsics.com/ನ್ಯೂಸಿಕ್ಸ್
ಬೆಂಗಳೂರು: ಭಾರತದ ಬಹುತೇಕ ರಾಜ್ಯಗಳಲ್ಲಿ ಹಿಟ್ ವೇವ್ ಸಮಸ್ಯೆ ಎದುರಾಗಿದೆ. ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ 43 ರಿಂದ 44 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯಾಗುವ ಎಚ್ಚರಿಕೆಯನ್ನ ಭಾರತ ಹವಾಮಾನ ಇಲಾಖೆ ನೀಡಿದೆ. ಇಂತಹ ಸಮಯದಲ್ಲಿ ಭಾರತದ ರೈತರಿಗೆ ಖುಷಿ ನೀಡುವ ಸುದ್ದಿಯೊಂದು ಹೊರಬಂದಿದೆ.
https://youtube.com/shorts/xzgXqaAsbcA?si=TkhVxPE1WLxdWyg8
ಹವಾಮಾನ ವರದಿಗಳ ಪ್ರಕಾರ ಈ ವರ್ಷ ಮೇ 14 ರಿಂದ 16 ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ನೈಋತ್ಯ ಮಾನ್ಸೂನ್ ಆಗಮನವಾಗುವ ಸಾಧ್ಯತೆಯಿದೆ.
ಮೇ ತಿಂಗಳಿನಲ್ಲಿ ಈ ಬಾರಿ ಸರಾಸರಿಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಆದರೆ ಪೂರ್ವ, ಮಧ್ಯ, ಈಶಾನ್ಯ ಭಾರತದಲ್ಲಿ ಕೊಂಚ ಮಳೆ ಕಡಿಮೆಯಿರುವ ಸಾಧ್ಯತೆಯಿದೆ. ಆದರೆ ಮಧ್ಯಭಾರತದ ಕೆಲವು ಭಾಗಗಳು, ಭಾರತದ ದಕ್ಷಿಣ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ಸಾಧ್ಯತೆಯಿದೆ ಎನ್ನಲಾಗಿದೆ.
ಜೂನ್ 1ರ ಬದಲಾಗಿ ಮೇ ಕೊನೆಯ ವಾರದಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಮೇ ತಿಂಗಳಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಶಾನ್ಯ ಭಾರತ, ಕೇಂದ್ರ ಭಾರತ ಮತ್ತು ಪೂರ್ವ ಭಾರತದ ಹಲವು ಭಾಗಗಳಲ್ಲಿ ಮೇ ತಿಂಗಳ ಮಳೆ ವಾಡಿಕೆಯಷ್ಟು ಅಥವಾ ವಾಡಿಕೆಗಿಂತ ತಾಪಮಾನ ಕಡಿಮೆ ಇರುವ ಸಾಧ್ಯತೆ ಇದೆ. ಹಿಮಾಲಯದ ತಪ್ಪಲಿನಲ್ಲಿ ವಾಡಿಕೆಗಿಂತ ಅಧಿಕ ಮಟ್ಟದಲ್ಲಿ ಉಷ್ಣ ಮಾರುತ ಬೀಸಲಿದೆ. ದೇಶದ ಹಲವು ಭಾಗಗಳಲ್ಲಿ ಮೇ ತಿಂಗಳ ಉಷ್ಣಾಂಶ ವಾಡಿಕೆಗಿಂತಲೂ ಅಧಿಕ ಮಟ್ಟದಲ್ಲಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.