newsics.com
ಲಕ್ನೋ: ರಕ್ಷಾ ಬಂಧನದಂದು ತವರು ಮನೆಗೆ ಹೋಗಬೇಕೆಂದು ಒತ್ತಾಯಿಸಿದ ಹೆಂಡತಿಯ ಮೂಗನ್ನು ಪತಿ ಕಚ್ಚಿದ ಘಟನೆ ಲಕ್ನೋ ದಲ್ಲಿ ನಡೆದಿದೆ.
ಇನ್ನು ತಕ್ಷಣ ಆಕೆಯನ್ನು ಲಕ್ನೋ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ದೇಹತ್ ಕೊತ್ವಾಲಿ ಪ್ರದೇಶದ ಬನಿಯಾನಿಪುರ್ವಾ ನಿವಾಸಿ ಅನಿತಾ ಎಂಬವರು ಪತಿ ರಾಹುಲ್ ಗೆ ತವರು ಮನೆಗೆ ಹೋಗುವಂತೆ ಒತ್ತಾಯಿಸುತ್ತಿದ್ದಳು. ಸದ್ಯ ನಿನ್ನನ್ನು ಮನೆಗೆ ಕಳುಹಿಸುವ ಪರಿಸ್ಥಿತಿ ಇಲ್ಲ ಎಂದು ಗಂಡ ಹೇಳುತ್ತಿದ್ದ. ಆದರೆ ಪತ್ನಿ ರಕ್ಷಾಬಂಧನ ನೆಪದಲ್ಲಿ ಪತಿಯೊಂದಿಗೆ ಜಗಳವಾಡಿದ್ದಾಳೆ. ಪತ್ನಿಯ ವಾದದಿಂದ ಕೋಪಗೊಂಡ ರಾಹುಲ್ ಅನಿತಾ ಮೂಗನ್ನೇ ಕಚ್ಚಿಬಿಟ್ಟಿದ್ದಾನೆ. ಆ ಬಳಿಕ ಅನಿತಾ ಸ್ಥಿತಿ ಹದಗೆಟ್ಟಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಮನೆಯಲ್ಲಿದ್ದ ಇತರರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂಲಕ ರಕ್ಷಾಬಂಧನದ ವಿಚಾರವಾಗಿ ಆರಂಭವಾದ ಜಗಳ ಘೋರ ಕೃತ್ಯಕ್ಕೆ ಕಾರಣವಾಗಿದೆ.
ಸದ್ಯ ಈ ಘಟನೆ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೃಪೇಂದ್ರ ತಿಳಿಸಿದ್ದು, ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.