Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Care: ದಿನಾ ತುಳಸಿ ಎಲೆಗಳನ್ನು ತಿನ್ನಿ ಸಾಕು; ಈ ಕಾಯಿಲೆಗಳು ನಿಮ್ಮತ್ತ ಸುಳಿಯೋದೇ ಇಲ್ಲ!
ಪ್ರಮುಖಆರೋಗ್ಯ

Health Care: ದಿನಾ ತುಳಸಿ ಎಲೆಗಳನ್ನು ತಿನ್ನಿ ಸಾಕು; ಈ ಕಾಯಿಲೆಗಳು ನಿಮ್ಮತ್ತ ಸುಳಿಯೋದೇ ಇಲ್ಲ!

Share
2 Min Read
SHARE

newsics.com/ನ್ಯೂಸಿಕ್ಸ್

ತುಳಸಿ ಗಿಡ ತುಂಬಾನೇ ಉಪಯುಕ್ತಕಾರಿ. ಅದರ ಎಲೆ ಮತ್ತು ಬೇರುಗಳು ಕೂಡ ಪ್ರಯೋಜನಕಾರಿ. ತುಳಸಿಯು ಧಾರ್ಮಿಕ ಪ್ರಾಮುಖ್ಯತೆಯನ್ನ ಹೊಂದಿದ್ದು, ಆಯುರ್ವೇದದ ದೃಷ್ಟಿಕೋನದಿಂದ ಕೂಡ ತುಳಸಿಯು ಔಷಧೀಯ ಗುಣಗಳಿಂದ ಕೂಡಿದೆ. ತುಳಸಿಯನ್ನ ಚಹಾಕ್ಕೆ ಸೇರಿಸಿ ಮಾತ್ರವಲ್ಲದೇ ಕಷಾಯ ಮಾಡಿ ಸೇವಿಸಲಾಗುತ್ತದೆ. ಇದು ಶೀತ, ಕೆಮ್ಮು, ಗಂಟಲು ನೋವು, ಜ್ವರ ಮುಂತಾದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ನಮ್ಮ ಅಜ್ಜಿಯರ ಕಾಲದಿಂದಲೂ ತುಳಸಿಯನ್ನ ಮನೆಮದ್ದಾಗಿ ಬಳಸಲಾಗುತ್ತೆ. ಆದ್ರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕು ತುಳಸಿ ಎಲೆಗಳನ್ನ ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?

ಅಂಕಿಅಂಶಗಳ ಪ್ರಕಾರ, ಸುಮಾರು 101 ಮಿಲಿಯನ್ ಭಾರತೀಯರು ಮಧುಮೇಹದಿಂದ ಬಳಲುತ್ತಿದ್ದಾರೆ. ಕಳಪೆ ಆಹಾರ ಪದ್ಧತಿ, ಮಾನಸಿಕ ಒತ್ತಡ, ಕುಳಿತಲ್ಲೇ ಕೆಲಸ ಮಾಡುವ ಜೀವನಶೈಲಿ ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ (Blood Sugar) ಏರುಪೇರಾಗುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಬರೀ ಔಷಧಿಗಳನ್ನೇ ಅವಲಂಬಿಸುವ ಬದಲು, ನಮ್ಮ ಅಂಗಳದಲ್ಲಿರುವ ‘ತುಳಸಿ’ ಎಂಬ ನೈಸರ್ಗಿಕ ಔಷಧಿಯನ್ನು ಬಳಸಿಕೊಂಡು ಸಕ್ಕರೆ ಮಟ್ಟವನ್ನು ಹೇಗೆ ನಿಯಂತ್ರಿಸಬಹುದು ಎಂಬ ಮಾಹಿತಿ ಇಲ್ಲಿದೆ.

ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಅನ್ನು ಸರಿಯಾಗಿ ಉತ್ಪಾದಿಸಲು ಸಾಧ್ಯವಾಗದಿದ್ದಾಗ ಅಥವಾ ನಮ್ಮ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ ಮಧುಮೇಹದ ಸಮಸ್ಯೆ ಉಂಟಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೆಲವು ಆಯುರ್ವೇದ ವಿಧಾನಗಳಿವೆ. ಕೆಲವು ಆಯುರ್ವೇದ ಗಿಡಮೂಲಿಕೆಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಬಹಳ ಸುಲಭವಾಗಿ ನಿಯಂತ್ರಿಸುತ್ತವೆ. ಅವುಗಳಲ್ಲಿ ಒಂದು ತುಳಸಿ ಎಲೆ. ತುಳಸಿ ಧಾರ್ಮಿಕವಾಗಿ ಮಾತ್ರವಲ್ಲ ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ತುಳಸಿಯಲ್ಲಿ ಹಲವು ವಿಧದ ಆಯುರ್ವೇದ ಔಷಧೀಯ ಗುಣಗಳಿದ್ದು ಇದು ಹಲವು ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ.

ಮಧುಮೇಹ ನಿಯಂತ್ರಣಕ್ಕೆ ತುಳಸಿ ಬಳಸುವ 3 ಸುಲಭ ವಿಧಾನಗಳು:

ತುಳಸಿ ಚಹಾ ಅಥವಾ ಕಷಾಯ:

ನಿಮ್ಮ ದಿನವನ್ನು ಒಂದು ಕಪ್ ತುಳಸಿ ಚಹಾದೊಂದಿಗೆ ಆರಂಭಿಸಿ. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ 5-6 ತುಳಸಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ನೀರು ಕುದಿಯಲು ಆರಂಭಿಸಿದ ನಂತರ ಉರಿಯನ್ನು ಆರಿಸಿ, ಪಾತ್ರೆಯನ್ನು ಮುಚ್ಚಿ 2-3 ನಿಮಿಷ ಬಿಡಿ. ನಂತರ ಈ ಕಷಾಯವನ್ನು ಸೋಸಿಕೊಂಡು ಕುಡಿಯಿರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

 

ರಾತ್ರಿ ನೆನೆಸಿದ ತುಳಸಿ ನೀರು:

ಇದು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದು. ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿನಲ್ಲಿ 4-5 ತುಳಸಿ ಎಲೆಗಳನ್ನು ಹಾಕಿಡಿ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ತೆಗೆದು ಆ ನೀರನ್ನು ಕುಡಿಯಿರಿ. ಈ ನೀರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದಲ್ಲದೆ, ದಿನವಿಡೀ ಸಕ್ಕರೆ ಮಟ್ಟ ಏರದಂತೆ ತಡೆಯುತ್ತದೆ.

ನೇರವಾಗಿ ಎಲೆಗಳನ್ನು ಜಗಿಯುವುದು:

ಯಾವುದೇ ತಯಾರಿ ಮಾಡಲು ಸಮಯವಿಲ್ಲದಿದ್ದರೆ, ಪ್ರತಿದಿನ ಬೆಳಿಗ್ಗೆ ಹಸಿ ತುಳಸಿ ಎಲೆಯನ್ನು ಚೆನ್ನಾಗಿ ಜಗಿದು ಅದರ ರಸವನ್ನು ನುಂಗಿ. ಒಂದು ಅಧ್ಯಯನದ ಪ್ರಕಾರ, ನಿಯಮಿತವಾಗಿ ತುಳಸಿ ಎಲೆಯನ್ನು ಸೇವಿಸುವವರಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ.

https://www.newsics.com/2026/05/01/i-got-pregnant-before-marriage-it-turned-out-well-famous-actress-surprising-statement/

TAGGED:Just eat basil leaves every day; these diseases will not befall you!
Share This Article
Facebook Twitter Copy Link Print
Previous Article Neha Dhupia ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದೆ… ಅದರಿಂದ ಒಳ್ಳೇದೇ ಆಯ್ತು! ಖ್ಯಾತ ನಟಿಯ ಅಚ್ಚರಿ ಹೇಳಿಕೆ
Next Article Largest Store: ಇದು ವಿಶ್ವದ ಅತಿ ದೊಡ್ಡ ತಿಂಡಿ ಅಂಗಡಿ : ಓಪನ್ ​ ಆದ ಎರಡೇ ದಿನಕ್ಕೆ ಸ್ಟಾಕ್​ ಖಾಲಿ!

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?