newsics.com/ನ್ಯೂಸಿಕ್ಸ್
ಸಿನಿಮಾ ತೆರೆಯ ಮೇಲಿನ ಪ್ರೇಮ ಕಥೆಗಳಿಗಿಂತ ತೆರೆಯ ಹಿಂದಿನ ನಟ-ನಟಿಯರ ಅಸಲಿ ಲವ್ ಸ್ಟೋರಿಗಳೇ ಹೆಚ್ಚು ಮಸಾಲೆಯುಕ್ತವಾಗಿರುತ್ತವೆ. ಅಂತಹದ್ದೇ ಒಂದು ‘ಬೋಲ್ಡ್ ಅಂಡ್ ಬ್ಯೂಟಿಫುಲ್’ ಲವ್ ಸ್ಟೋರಿ ಈಗ ಬಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದು ಬೇರಾರದ್ದೂ ಅಲ್ಲ, ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನೇಹಾ ಧೂಪಿಯಾ ಮತ್ತು ಹ್ಯಾಂಡ್ಸಮ್ ಹಂಕ್ ಅಂಗದ್ ಬೇಡಿ ಅವರದ್ದು.
2018ರಲ್ಲಿ ಗುರುದ್ವಾರದಲ್ಲಿ ನೇಹಾ ಹಾಗೂ ಅಂಗದ್ ಮದುವೆ ಸರಳವಾಗಿ ನಡೆದಿತ್ತು. ದಂಪತಿಗೆ ಮೆಹರ್ ಎಂಬ ಮಗಳು ಇದ್ದಾಳೆ. ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಪಾಡ್ಕಾಸ್ಟ್ನಲ್ಲಿ ಅಂಗದ್ ದಂಪತಿ ಭಾಗಿ ಆಗಿದ್ದಾರೆ. ತಮ್ಮ ಲವ್ ಸ್ಟೋರಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮಿಬ್ಬರ ಸ್ನೇಹ, ಪ್ರೀತಿ ಹಾಗೂ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನಾನು 8 ವರ್ಷಗಳ ಕಾಲ ನೇಹಾ ಹಿಂದೆ ಬಿದ್ದಿದ್ದೆ. ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಕೇಳುತ್ತಿದ್ದೆ. ಆದ್ರೆ ಆಕೆ ಓಕೆ ಎನ್ನಲಿಲ್ಲ. ತನ್ನ ಕೆಲಸಗಳಲ್ಲಿ ಸದಾ ಬ್ಯುಸಿ ಇರ್ತಿದ್ಲು.. ಮೊದಲ ನೋಟದಲ್ಲೇ ನೇಹಾ ಮೇಲೆ ಮನಸ್ಸಾಗಿತ್ತು ಎಂದು ಅಂಗದ್ ಬೇಡಿ ಹೇಳಿದ್ದಾರೆ.
ಮೊದಲ ಬಾರಿ ನೇಹಾಳನ್ನು ನೋಡಿ ಅಚ್ಚರಿಗೊಂಡಿದ್ದೆ. ಬಹಳ ಸುಂದರವಾಗಿದ್ದಳು, ಟ್ರೆಡ್ಮಿಲ್ ಮೇಲೆ ಓಡುವುದನ್ನು ನೋಡುವುದು, ಅವಳ ಮೈಮಾಟ, ಕ್ರೀಡಾ ಮನೋಭಾವ ಇಷ್ಟವಾಗಿತ್ತು. ಅದು ನನ್ನ ಮೇಲೆ ಪ್ರಭಾವ ಬೀರಿತ್ತು ಎಂದು ಅಂಗದ್ ತಿಳಿಸಿದ್ದಾರೆ. ನೇಹಾಳ ಜೊತೆ ಹೆಚ್ಚು ಸಮಯ ಕಳೆಯಬೇಕು ಎನ್ನುವ ಕಾರಣಕ್ಕೆ ಸ್ಕ್ರಿಪ್ಟ್ ಕೇಳದೇ ಸಿನಿಮಾವೊಂದರಲ್ಲಿ ಜೊತೆ ನಟಿಸೋಕೆ ಒಪ್ಪಿಕೊಂಡೆ. ಆಕೆಯ ಫ್ಯಾಮಿಲಿಗೆ ನಾನು ಹೊಂದಿಕೊಂಡರೂ ಪ್ರಯೋಜನವಾಗಿರಲಿಲ್ಲ” ಎಂದಿದ್ದಾರೆ.
ನೇಹಾ ಗರ್ಭಿಣಿ ಎಂದು ಗೊತ್ತಾದಾಗಲೇ ನಮ್ಮ ಸಂಬಂಧ ಒಂದು ತಿರುವು ಪಡೆಯಿತು ಎಂದು ದಂಪತಿ ಹೇಳಿದ್ದಾರೆ. “ನಾನು ಗರ್ಭಿಣಿಯಾಗಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ಮಗಳಿಂದಲೇ ನಮ್ಮ ಪ್ರೇಮಕಥೆ.. ಇಲ್ಲದಿದ್ದರೆ, ಸುತ್ತಲೂ ನೋಡುತ್ತಲೇ ಇರ್ತೀವಿ. ನಾವು ಹುಡುಕುತ್ತಿರುವ ಪ್ರೀತಿ ನಿಮ್ಮ ಪಕ್ಕದಲ್ಲಿದ್ರು, ನಾವು ಯಾವಾಗಲೂ ದೂರ ಹುಡುಕುತ್ತೇವೆ. ಅಂಗದ್ ಯಾವಾಗಲೂ ನನ್ನ ಪಕ್ಕದಲ್ಲಿಯೇ ಇದ್ದ” ಎಂದು ನೇಹಾ ನೆನಪಿಸಿಕೊಂಡಿದ್ದಾರೆ.
ಬಳಿಕ ಮಾತು ಮುಂದುವರೆಸಿರುವ ನೇಹಾ “ನಾನು ಗರ್ಭಿಣಿ ಆಗಿದ್ದರಿಂದ ನಮ್ಮ ಮಗಳೇ ನಮ್ಮಿಬ್ಬರನ್ನು ಒಂದು ಮಾಡಿದಳು. ಇಡೀ ಯೂನಿವರ್ಸ್ ಮೊದಲು ಅಂಗದ್ ಜೊತೆಯಾಯಿತು, ಬಳಿಕ ನನಗೆ ಕೊನೆಗೆ ನಮಗೆ ಜೊತೆಯಾಗಿ ಎಲ್ಲವೂ ಸಾಧ್ಯವಾಯಿತು” ಎಂದು ನೇಹಾ ಧೂಪಿಯಾ ವಿವರಿಸಿದ್ದಾರೆ.
https://www.newsics.com/2026/05/01/what-is-the-first-day-box-office-collection-of-kd-movie/